ಅಮೆರಿಕ ಮಿಲಿಟರಿ ನೆಲೆಯ 13ಮಂದಿ ಹತ್ಯೆಗೈದ ಬಾಂಬರ್ ಹಾಗೂ ಕಳೆದ ವರ್ಷ ಅಮೆರಿಕ ವಿಮಾನವನ್ನು ಧ್ವಂಸಗೊಳಿಸಲು ಯತ್ನಿಸಿದ ನೈಜೀರಿಯಾದ ಬಾಂಬರ್‌ಗೆ ನಾವೇ ತರಬೇತಿ ನೀಡಿರುವುದಾಗಿ ಅರೇಬಿಯನ್ ದ್ವೀಪ ಪ್ರದೇಶದ ಅಲ್ ಖಾಯಿದಾ ಮುಖಂಡ ಮಂಗಳವಾರ ತಿಳಿಸಿದ್ದಾನೆ.
ಅಲ್ ಖಾಯಿದಾ ಮುಖಂಡ ಅನ್ವರ್ ಅವ್‌ಲಾಖಿ ಈ ಹೇಳಿಕೆ ನೀಡಿದ್ದು, ಕಳೆದ ವರ್ಷ ಡಿಸೆಂಬರ್ 25ರಂದು ಅಮೆರಿಕದ ಡೆಟ್ರಾಯಿಟ್ ವಿಮಾನವನ್ನು ಧ್ವಂಸಗೊಳಿಸಲು ಯತ್ನಿಸಿ ವಿಫಲನಾಗಿ ಸೆರೆ ಸಿಕ್ಕಿರುವ ಲಂಡನ್‌ನಲ್ಲಿ ವಿದ್ಯಾಭ್ಯಾಸ ಪಡೆದ ನೈಜೀರಿಯಾದ ಉಮರ್ ಫಾರೂಕ್ ಅಬ್ದುಲ್‌ಮುತಾಲ್ಲಾಬ್‌ಗೆ ತರಬೇತಿ ನೀಡಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ.
ಅಲ್ಲದೇ ಅದೇ ರೀತಿ ಅಮೆರಿಕ ಸಂಜಾತ ವೈದ್ಯ ಪ್ಯಾಲೆಸ್ತೇನಿನ ನಿಡಾಲ್ ಹಸ್ಸನ್‌ಗೂ ಕೂಡ ತರಬೇತಿ ನೀಡಿರುವ ಬಗ್ಗೆ ಹೆಮ್ಮೆ ಇದೆ. ಈತ ಟೆಕ್ಸಾಸ್‌ನಲ್ಲಿ ಕಳೆದ ವರ್ಷ ನವೆಂಬರ್‌ನಲ್ಲಿ 13 ಮಂದಿ ಅಮೆರಿಕನ್‌ರನ್ನು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದ.