ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕಾ ಡ್ರೋನ್ ದಾಳಿಗೆ ಪಾಕಿಸ್ತಾನದಲ್ಲಿ 8 ಉಗ್ರರು ಬಲಿ (US drone strike | Pakistan | United States | Taliban fighters)
Bookmark and Share Feedback Print
 
ಪಾಕಿಸ್ತಾನ ವಾಯುವ್ಯ ಬುಡಕಟ್ಟು ಪ್ರಾಂತ್ಯದ ತಾಲಿಬಾನ್ ಹಿಡಿತದ ಪ್ರದೇಶದ ಮೇಲೆ ಅಮೆರಿಕಾ ಕ್ಷಿಪಣಿ ದಾಳಿ ನಡೆಸಿದ್ದು, ಕನಿಷ್ಠ ಎಂಟು ಮಂದಿ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ವಜಿರಿಸ್ತಾನದ ನಗರ ಮಿರಾನ್‌ಶಾಹ್‌ ಪೂರ್ವ ಭಾಗದಲ್ಲಿ ಮಂಗಳವಾರ ಮುಂಜಾನೆ ಮೂರು ಕ್ಷಿಪಣಿ ದಾಳಿಗಳನ್ನು ನಡೆಸಲಾಯಿತು. ಸ್ಥಳೀಯ ಬಂಡುಕೋರ ಕಮಾಂಡರ್ ಹಲೀಮ್ ಖಾನ್ ಮತ್ತು ಆತನ ಸಹಚರರ ಅಡಗುದಾಣಗಳನ್ನು ಗುರಿಯಾಗಿರಿಸಿಕೊಂಡು ಅಮೆರಿಕಾ ಡ್ರೋನ್ ದಾಳಿಗಳನ್ನು ನಡೆಸಿತ್ತು ಎಂದು ಪಾಕಿಸ್ತಾನದ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ಎಂಟು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆರಂಭದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತಾದರೂ, ನಂತರ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಭದ್ರತಾ ಪಡೆಗಳು ಖಚಿತಪಡಿಸಿವೆ.

ಸತ್ತವರಲ್ಲಿ ಹೆಚ್ಚಿನವರು ಪಕ್ಕದ ದಕ್ಷಿಣ ವಜಿರಿಸ್ತಾನದ ಮೆಹ್ಸೂದ್ ಬುಡಕಟ್ಟು ಪ್ರದೇಶದವರು. ಅವರು ಪಾಕಿಸ್ತಾನದ ಟೆಹ್ರಿಕ್ ಇ ತಾಲಿಬಾನ್‌ನ ಪ್ರಮುಖ ನಾಯಕರು. ಆದರೆ ಸ್ಥಳೀಯ ನಾಯಕ ಹಲೀಮ್ ಖಾನ್ ಸಾವನ್ನಪ್ಪಿಲ್ಲ.

2008ರ ಆಗಸ್ಟ್ ತಿಂಗಳಿನ ನಂತರ ಪಾಕಿಸ್ತಾನದಲ್ಲಿ ಅಮೆರಿಕಾ ನಡೆಸಿರುವ ಸುಮಾರು 100 ಡ್ರೋನ್ ದಾಳಿಗಳಲ್ಲಿ 880ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಅದೇ ಹೊತ್ತಿಗೆ ಡ್ರೋನ್ ದಾಳಿಗೆ ಅವಕಾಶ ನೀಡುತ್ತಿರುವ ಪಾಕಿಸ್ತಾನ ಸರಕಾರದ ವಿರುದ್ಧ ಮತ್ತು ಅಮೆರಿಕಾ ವಿರುದ್ಧ ಮುಸ್ಲಿಮರಲ್ಲಿ ಆಕ್ರೋಶಗಳು ಹೆಚ್ಚುತ್ತಿದ್ದು, ಇದಕ್ಕೆ ಭಯೋತ್ಪಾದಕ ಸಂಘಟನೆಗಳು ನೀರೆರೆದು ಪೋಷಿಸುತ್ತಿವೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ