ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಉಕ್ರೈನ್ ಸಂಸತ್: ಮಾರಾಮಾರಿ,ಹೊಗೆ ಬಾಂಬ್ ದಾಳಿ (Ukraine, Russia, Black Sea, moke bombs,Kiev)
Bookmark and Share Feedback Print
 
PTI
ಮಾರಾಮಾರಿ, ಕೂಗಾಟ, ಎಗರಾಟ ಕೇವಲ ಭಾರತದ ಸಂಸತ್‌ನಲ್ಲಿ ಮಾತ್ರವಲ್ಲ, ದೇಶದ ಹಲವು ಸಂಸತ್‌ಗಳಲ್ಲಿ ಅದು ಪುನರಾವರ್ತನೆಯಾಗುತ್ತಿದೆ. ರಷ್ಯಾ ಜೊತೆ ವಿವಾದಿತ ನೌಕಾ ನೆಲೆ ಗುತ್ತಿಗೆ ವಿಸ್ತರಣೆಗೆ ಸಂಸತ್ ಅನುಮೋದನೆ ನೀಡುವ ವಿಚಾರದಲ್ಲಿ ವಿರೋಧ ಪಕ್ಷದ ಸದಸ್ಯರು ಹೊಯ್ ಕೈ ನಡೆಸಿ, ಸ್ಪೀಕರ್ ಮೇಲೆ ಹೊಗೆ ಬಾಂಬ್ ಮತ್ತು ಕೋಳಿ ಮೊಟ್ಟೆ ಎಸೆದ ಘಟನೆ ಉಕ್ರೈನ್ ಸಂಸತ್‌ನಲ್ಲಿ ಮಂಗಳವಾರ ನಡೆಯಿತು.

ರಷ್ಯಾ ಜೊತೆ ವಿವಾದಿತ ನೌಕಾ ನೆಲೆ ಗುತ್ತಿಗೆ ಒಪ್ಪಂದ 2017ರಲ್ಲಿ ಮುಕ್ತಾಯವಾಗಲಿದ್ದು, ಆ ನಿಟ್ಟಿನಲ್ಲಿ ಹಳೇ ಒಪ್ಪಂದದ ಮುಂದುವರಿಕೆಗೆ, ಮುಂದಿನ 25ವರ್ಷಗಳ ಗುತ್ತಿಗೆ ಒಪ್ಪಂದಕ್ಕೆ ಎರಡು ದೇಶಗಳ ಅಧ್ಯಕ್ಷರು ಮುಂದಾಗಿದ್ದರು. ಇದಕ್ಕೆ ಸಂಸತ್ ಅನುಮೋದನೆಯ ಅಗತ್ಯವಿತ್ತು. ಆ ನಿಟ್ಟಿನಲ್ಲಿ ಸಂಸತ್ ಕಲಾಪ ಆರಂಭವಾಗುತ್ತಿದ್ದಂತೆಯೇ ಮಾರಾಮಾರಿ ಆರಂಭಗೊಂಡಿತ್ತು.

ಸಂಸತ್ ರಣಾಂಗಣವಾಗಿ ವಿರೋಧ ಪಕ್ಷದ ಸದಸ್ಯರು ಸ್ಪೀಕರ್ ವ್ಲೋಡಿಮಿರ್ ಲಿಟ್ವಿನ್ ಮೇಲೆ ಕೋಳಿ ಮೊಟ್ಟೆ ಎಸೆಯಲು ಪ್ರಾರಂಭಿಸಿದ್ದರು. ಪರಿಸ್ಥಿತಿ ಹತೋಟಿ ತಪ್ಪುತ್ತಿದ್ದಂತೆಯೇ ಭದ್ರತಾ ಅಧಿಕಾರಿಗಳು ಸ್ಪೀಕರ್‌ಗೆ ಅಡ್ಡಲಾಗಿ ನಿಂತರು. ಆದರೆ ಅಷ್ಟರಲ್ಲಿಯೇ ಎಲ್ಲಿಂದಲೋ ಹೊಗೆಬಾಂಬ್‌ವೊಂದನ್ನು ಎಸೆದರು.

ಇಡೀ ಸದನ ಹೊಗೆಯಿಂದ ಆವರಿಸಿತ್ತು. ಸದನದಲ್ಲಿ ಏನು ನಡೆಯುತ್ತಿದೆ ಎಂಬುದೇ ಯಾರಿಗೂ ಕಾಣಿಸಲಿಲ್ಲ. ಅದೇ ವೇಳೆಗೆ ಇನ್ನೊಂದು ಹೊಗೆಬಾಂಬ್ ಬಿದ್ದಿತ್ತು.

ಏತನ್ಮಧ್ಯೆ 450 ಸದಸ್ಯಬಲದ ಸಂಸತ್‌ನಲ್ಲಿ ಗುತ್ತಿಗೆ ನವೀಕರಣದ ಪರ 236 ಸದಸ್ಯರು ಮತ ಚಲಾಯಿಸಿದರು. ಇದನ್ನು ಖಂಡಿಸಿದ ಪ್ರತಿಪಕ್ಷದ ಸದಸ್ಯರು ಶೇಮ್, ಶೇಮ್ ಎಂಬ ಘೋಷಣೆ ಕೂಗಿ ಸಭಾತ್ಯಾಗ ಮಾಡಿದರು. ಅಲ್ಲದೇ ವಿರೋಧ ಪಕ್ಷದ ನಾಯಕಿ ಯೂಲಿಯ ಟೈಮೋಶೆನ್‌ಕೋ ಇದನ್ನು ನಾವು ಯಾವುದೇ ಕಾರಣಕ್ಕೂ ಒಪ್ಪಲ್ಲ ಎಂದು ಶಪಥಗೈದರು. ನಾವು ಮತ್ತೆ ಅಧಿಕಾರದ ಗದ್ದುಗೆ ಏರಿ, ಈ ಒಪ್ಪಂದವನ್ನು ಕಿತ್ತೊಗೆಯುವುದಾಗಿ ಕಿಡಿಕಾರಿರುವುದಾಗಿ ಟಾಸ್ ನ್ಯೂಸ್ ಸುದ್ದಿಸಂಸ್ಥೆ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ