ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 2700 ಬಾರಿ ಗುಂಡು ಹೊಡೆದ್ರೂ ಬದುಕುಳಿದ ಅಧಿಕಾರಿ! (Mexico | 2,700 bullets | drug | Michoacan | cartel)
Bookmark and Share Feedback Print
 
'ಕೊಲ್ಲುವ ಯಮನಿಗಿಂತ ಕಾಯುವ ದೇವರು ದೊಡ್ಡೋನು' ಎಂಬ ಗಾದೆ ಮಾತಿಗೆ ಸಾಕ್ಷಿ ಎಂಬಂತೆ ಮೆಕ್ಸಿಕೋದ ಅಧಿಕಾರಿಯೊಬ್ಬರನ್ನು ಹತ್ಯೆಗೈಯುವ ಉದ್ದೇಶದಿಂದ 2700ಕ್ಕೂ ಹೆಚ್ಚು ಗುಂಡು ಹೊಡೆದರೂ ಪವಾಡ ಸದೃಶ ಪ್ರಾಣಾಪಾಯದಿಂದ ಪಾರಾಗಿರುವ ಅಪರೂಪದ ಘಟನೆ ನಡೆದಿದೆ.

ಮೆಕ್ಸಿಕೋದ ಸಾರ್ವಜನಿಕ ರಕ್ಷಣಾಧಿಕಾರಿಯಾಗಿರುವ ಮಿನೆರ್ವಾ ಬಾಟಿಸ್ಟಾ ಗೋಮೆಜ್ ಎಂಬಾಕೆಯೇ ಸಾವಿನಿಂದ ಪಾರಾದ ಮಹಿಳಾ ಅಧಿಕಾರಿಯಾಗಿದ್ದಾರೆ.

ಬಾಟಿಸ್ಟಾ ಅವರು ಪೂರ್ವ ಭಾಗದ ಮಿಕೋಕೆನ್ ಪ್ರದೇಶದತ್ತ ತೆರಳುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಇದೀಗ ಅವರ ಆರೋಗ್ಯ ಸುಸ್ಥಿತಿಯಲ್ಲಿದೆ. ಶೀಘ್ರವೇ ಆಸ್ಪತ್ರೆಯಿಂದ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ದಾರಿಯಲ್ಲಿ ತೆರಳುತ್ತಿದ್ದಾಗ ವ್ಯಕ್ತಿಯೊಬ್ಬ ಇವರ ಮೇಲೆ ಗುಂಡಿನ ಮಳೆಗೆರೆದಿದ್ದ. ಆದರೆ ಈ ಮಾರಣಾಂತಿಕ ದಾಳಿಯಲ್ಲಿ ಮಿನೆರ್ವಾ ಅವರು ಪಾರಾಗಿದ್ದರೆ, ಅವರ ಇಬ್ಬರು ಅಂಗರಕ್ಷರು ಮತ್ತು ಇಬ್ಬರು ನಾಗರಿಕರು ಬಲಿಯಾಗಿದ್ದಾರೆ. ಅಲ್ಲದೇ ಬಾಟಿಸ್ಟಾ ಮತ್ತು ಒಂಬತ್ತು ಮಂದಿ ಗಾಯಗೊಂಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

ಮೆಕ್ಸಿಕೋದಲ್ಲಿ ಇತ್ತೀಚಿನ ವರ್ಷಗಳಲ್ಲಿ ಡ್ರಗ್ ಮಾಫಿಯಾ ಸಂಬಂಧಿ ಹಿಂಸಾಚಾರ, ದಾಳಿ ಹೆಚ್ಚಾಗಿ ನಡೆಯುತ್ತಿದೆ. ಮೆಕ್ಸಿಕೋದಲ್ಲಿ ಡ್ರಗ್ ಮಾಫಿಯಾ ಪ್ರಬಲವಾಗಿ ಬೆಳೆಯುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ಆ ನಿಟ್ಟಿನಲ್ಲಿ ಬಾಟಿಸ್ಟಾ ಅವರ ಮೇಲೆ ನಡೆದ ದಾಳಿಯೂ ಸಾಕ್ಷಿಯಾಗಿದೆ.

ಡ್ರಗ್ ಮಾಫಿಯಾ ಖದೀಮರು ನಡೆಸಿರುವ ದಾಳಿಗೆ ಈವರೆಗೆ 22,743ಮಂದಿ ಸಾವನ್ನಪ್ಪಿದ್ದಾರೆ ಎಂದು ಮೆಕ್ಸಿಕೋ ಸರ್ಕಾರ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ. ಆ ನೆಲೆಯಲ್ಲಿ 2006 ಡಿಸೆಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ಅಧ್ಯಕ್ಷ ಫೆಲಿಪೆ ಕಾಲ್‌ಡ್ರೊನ್ ಡ್ರಗ್ ಮಾಫಿಯಾದ ವಿರುದ್ಧ ಸಮರ ಸಾರಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ