ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶಾಲೆಗಳಲ್ಲಿ ಬುರ್ಖಾ ಯಾಕೆ - ಶಿಲುಬೆ ಓಕೆ!: ಸಮೀಕ್ಷೆ (Madrid | European Union | Islamic veil | BBVA | Study)
Bookmark and Share Feedback Print
 
ಶಾಲೆಗಳಲ್ಲಿ ಬುರ್ಖಾ ಧರಿಸುವುದಕ್ಕೆ ಯುರೋಪಿನ ಶೇ.50ಕ್ಕೂ ಅಧಿಕ ಮಂದಿ ವಿರೋಧ ವ್ಯಕ್ತಪಡಿಸಿರುವ ಅಂಶವೊಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಆದರೆ ತರಗತಿಯಲ್ಲಿ ಏಸು ಕ್ರಿಸ್ತನ ಶಿಲುಬೆ ಧರಿಸಿಕೊಳ್ಳಲು ಬಹುತೇಕರು ಸಹಮತ ವ್ಯಕ್ತಪಡಿಸಿರುವುದಾಗಿ ಸಮೀಕ್ಷೆಯೊಂದು ತಿಳಿಸಿದೆ ಎಂದು ಸುದ್ದಿಸಂಸ್ಥೆಯ ವರದಿ ಹೇಳಿದೆ.

ಯುರೋಪಿಯನ್ ಒಕ್ಕೂಟದ 12ದೇಶಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, ಶೇ.52.6ರಷ್ಟು ಜನರು ಶಾಲೆಗಳಲ್ಲಿ ಬುರ್ಖಾ ಧರಿಸುವುದಕ್ಕೆ ವಿರೋಧ ಅಥವಾ ಒಟ್ಟಾರೆ ವಿರೋಧ ವ್ಯಕ್ತಪಡಿಸಿರುವುದಾಗಿ ತಿಳಿಸಿದೆ. ಸ್ಪ್ಯಾನಿಷ್‌ನ ಎರಡನೇ ಬೃಹತ್ ಬ್ಯಾಂಕ್‌ನ ಬಿಬಿವಿಎನ ಸಂಶೋಧನಾ ವಿಭಾಗ ಈ ಸಮೀಕ್ಷೆಯನ್ನು ನಡೆಸಿತ್ತು.

ಬುರ್ಖಾ ಧರಿಸಲು ತೀವ್ರ ವಿರೋಧ ವ್ಯಕ್ತಪಡಿಸಿದ ಪಟ್ಟಿಯಲ್ಲಿ ಬಲ್ಗೇರಿಯಾ ಶೇ.84.3ರಷ್ಟು ವಿರೋಧಿಸಿ ಪ್ರಥಮ ಸ್ಥಾನದಲ್ಲಿದ್ದರೆ, ಫ್ರಾನ್ಸ್-ಶೇ.68.7. ಆದರೆ ಪೋಲಾಂಡ್ ಮಾತ್ರ ಬುರ್ಖಾ ಧರಿಸುವ ವಿರುದ್ಧ ಶೇ. 25.6ರಷ್ಟು ಅತೀ ಕಡಿಮೆ ವಿರೋಧ ವ್ಯಕ್ತಪಡಿಸಿದೆ. ಅದೇ ರೀತಿ ಡೆನ್ಮಾರ್ಕ್ ಕೂಡ ಶೇ.28.1ರಷ್ಟು ಮಾತ್ರ.

ಆದರೆ ಶಾಲೆಗಳಲ್ಲಿ ಏಸು ಕ್ರಿಸ್ತನ ಶಿಲುಬೆ ಧರಿಸಲು ಶೇ.54.4ರಷ್ಟು ಮಂದಿ ಒಲವು ವ್ಯಕ್ತಪಡಿಸಿದ್ದಾರೆ. ಸ್ಪೈಯ್ನ್ ಮತ್ತು ಇಟಲಿ ಎರಡು ಕಟ್ಟಾ ರೋಮನ್ ಕ್ಯಾಥೋಲಿಕ್ ಸಂಪ್ರದಾಯದ ದೇಶಗಳಾಗಿವೆ. ಆ ನಿಟ್ಟಿನಲ್ಲಿ ಸ್ಪೈಯ್ನ್ ಶೇ.69.9ರಷ್ಟು ಮತ್ತು ಇಟಲಿ ಶೇ.49.3ರಷ್ಟು ಮಂದಿ ಶಿಲುಬೆ ಧರಿಸುವುದನ್ನು ಬೆಂಬಲಿಸಿದೆ. ಅದೇ ರೀತಿ ಬ್ರಿಟನ್ ಶೇ.77ರಷ್ಟು, ಡೆನ್ಮಾರ್ಕ್ ಶೇ.78.8ರಷ್ಟು ಮಂದಿ ಸಹಮತ ವ್ಯಕ್ತಪಡಿಸಿದ್ದಾರೆ.

ಬುರ್ಖಾ ಮತ್ತು ಶಿಲುಬೆ ಧಾರಣೆ ಕುರಿತಂತೆ ಬಿಬಿವಿಎ ಯುರೋಪಿಯನ್ ಒಕ್ಕೂಟದ ದೇಶವಾದ ಬೆಲ್ಜಿಯಂ, ಬ್ರಿಟನ್, ಬಲ್ಗೇರಿಯಾ, ಡೆನ್ಮಾರ್ಕ್, ಫ್ರಾನ್ಸ್, ಜರ್ಮನಿ, ಗ್ರೀಕ್, ಇಟಲಿ, ಪೋಲಾಂಡ್, ಪೋರ್ಚುಗಲ್, ಸ್ಪೈಯ್ನ್ ಮತ್ತು ಸ್ವೀಡನ್, ಸ್ವಿರ್ಟ್ಜರ್‌ಲ್ಯಾಂಡ್, ಟರ್ಕಿಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಸುಮಾರು 1500ಮಂದಿ ಭಾಗವಹಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ