ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತ ಗಡಿಯಿಂದ ಲಕ್ಷ ಪಡೆಯನ್ನು ವಾಪಸ್ ಪಡೆದ ಪಾಕ್ (Pakistan | India | Taliban | internal insurgency)
Bookmark and Share Feedback Print
 
ತಾಲಿಬಾನ್ ಮತ್ತು ಅಫಘಾನಿಸ್ತಾನ ಗಡಿ ಭಾಗದ ಅವಿಶ್ರಾಂತ ಪ್ರದೇಶಗಳಲ್ಲಿ ಅಡಗಿರುವ ಇತರ ಭಯೋತ್ಪಾದಕರ ಹುಟ್ಟಡಗಿಸಲು ಭಾರತದ ಗಡಿ ಭಾಗದಲ್ಲಿ ನಿಯೋಜಿಸಲ್ಪಟ್ಟಿದ್ದ ಒಂದು ಲಕ್ಷ ರಕ್ಷಣಾ ಪಡೆಗಳನ್ನು ಪಾಕಿಸ್ತಾನ ಹಿಂದಕ್ಕೆ ಕರೆಸಿಕೊಂಡಿದೆ ಎಂದು ಅಮೆರಿಕಾದ ರಕ್ಷಣಾ ಇಲಾಖೆ ಗುರುವಾರ ತಿಳಿಸಿದೆ.

ಪ್ರಸಕ್ತ ಪಾಕಿಸ್ತಾನಕ್ಕೆ ಭಯೋತ್ಪಾದನೆ ಮತ್ತು ಆಂತರಿಕ ಬಂಡಾಯವು ಹೆಚ್ಚು ಬೆದರಿಕೆಯಾಗಿದೆ ಎಂಬುದನ್ನು ಮನಗಂಡು ರಕ್ಷಣಾ ಪಡೆಗಳ ಸಾಮೂಹಿಕ ಸ್ಥಳಾಂತರಕ್ಕೆ ಮುಂದಾಗಲಾಗಿದೆ ಎಂದು ಅಮೆರಿಕಾ ಕಾಂಗ್ರೆಸ್‌ಗೆ ಕಳುಹಿಸಿರುವ ವರದಿಯಲ್ಲಿ ಪೆಂಟಗನ್ ತಿಳಿಸಿದೆ.

ದೇಶದ ಪೂರ್ವ ಭಾರತ ಗಡಿಯಲ್ಲಿನ 1,00,000 ಮಿಲಿಟರಿ ಸಿಬ್ಬಂದಿಗಳನ್ನು ಸ್ಥಳಾಂತರಿಸಲಾಗಿದೆ. ಈ ಅಭೂತಪೂರ್ವ ನಿಯೋಜನೆಯು ಭಾರತದ ಜತೆಗಿನ ಅಂತರವನ್ನು ಕಡಿಮೆ ಮಾಡುವುದನ್ನು ಮತ್ತು ತನಗೆ ಆಂತರಿಕ ಬೆದರಿಕೆ ಹೆಚ್ಚಿರುವುದನ್ನು ಇಸ್ಲಾಮಾಬಾದ್ ಮನಗಂಡಿರುವುದನ್ನು ಸೂಚಿಸುತ್ತಿದೆ ಎಂದು ಇತ್ತೀಚಿನ ಅಫಘಾನಿಸ್ತಾನ ಕುರಿತ ವರದಿಯಲ್ಲಿ ವಿವರಣೆ ನೀಡಲಾಗಿದೆ.

ಪಾಕಿಸ್ತಾನವು ತನ್ನ ಪಡೆಗಳನ್ನು ನಿರ್ದಿಷ್ಟವಾಗಿ ಎಲ್ಲಿಂದ ಹಿಂದಕ್ಕೆ ಪಡೆದಿದೆ ಎಂಬುದನ್ನು ಪೆಂಟಗನ್ ತನ್ನ ವರದಿಯಲ್ಲಿ ತಿಳಿಸಿಲ್ಲ. ಆದರೆ ಸರಿಸುಮಾರು 1,40,000 ಪಡೆಗಳು ಪಾಕಿಸ್ತಾನದ ಅರೆ ಸ್ವಾಯತ್ತ ಕೇಂದ್ರಾಡಳಿತ ಬುಡಕಟ್ಟು ಪ್ರದೇಶಗಳಲ್ಲಿ ತಾಲಿಬಾನ್ ವಿರುದ್ಧ ಹೋರಾಟ ನಡೆಸುತ್ತಿವೆ ಎಂದು ಹೇಳಿದೆ.

ಸಾರ್ಕ್ ಶೃಂಗಸಭೆಗಾಗಿ ಭೂತಾನ್‌ನಲ್ಲಿರುವ ಭಾರತ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಾಕ್ ಪ್ರಧಾನಿ ಯೂಸುಫ್ ರಾಜಾ ಗಿಲಾನಿಯವರು ಪರಸ್ಪರ ಮಾತುಕತೆ ನಡೆಸುವ ಗಂಟೆಯ ಮೊದಲಷ್ಟೇ ಈ ವರದಿಯನ್ನು ಅಮೆರಿಕಾ ಬಿಡುಗಡೆ ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ