ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜಿ8 ಶೃಂಗದಲ್ಲಿ ಜಾರ್ಜ್ ಬುಶ್‌ ದಂಪತಿಗೆ ವಿಷಪ್ರಾಶನ? (G8 summit | Laura Bush | George W Bush | Germany)
Bookmark and Share Feedback Print
 
ಜರ್ಮನಿಯಲ್ಲಿ ನಡೆದಿದ್ದ 2007ರ ಜಿ8 ಶೃಂಗಸಭೆಯಲ್ಲಿ ಆಗಿನ ಅಮೆರಿಕಾ ಅಧ್ಯಕ್ಷ ಜಾರ್ಜ್ ಬುಶ್ ಮತ್ತು ಅವರ ಪತ್ನಿ ಲಾರಾ ಬುಶ್ ಅವರಿಗೆ ವಿಷಪ್ರಾಶನ ಮಾಡಿರುವ ಸಾಧ್ಯತೆಗಳಿದ್ದವು ಮತ್ತು ಅದೇ ಕಾರಣದಿಂದ ಅವರು ಅಸೌಖ್ಯಕ್ಕೊಳಗಾಗಿದ್ದರು ಎಂಬುದು ಬಹಿರಂಗವಾಗಿದೆ.

ಅಮೆರಿಕಾದ ಮಾಜಿ ಮೊದಲ ಮಹಿಳೆ ಲಾರಾ ಬುಶ್ ಬರೆಯುತ್ತಿರುವ ಆತ್ಮಕತೆಯಲ್ಲಿ ಇದನ್ನು ನಮೂದಿಸಿದ್ದಾರೆ ಎಂದು 'ನ್ಯೂಯಾರ್ಕ್ ಟೈಮ್ಸ್' ಪತ್ರಿಕೆ ಬುಧವಾರ ತನ್ನ ವರದಿಯಲ್ಲಿ ತಿಳಿಸಿದೆ.

ಜಿ8 ಶೃಂಗಸಭೆಯಲ್ಲಿ ಅಧ್ಯಕ್ಷೀಯ ನಿಯೋಗಕ್ಕೆ ವಿಷ ಉಣ್ಣಿಸಲಾಗಿತ್ತೇ ಎಂಬುದನ್ನು ಅಮೆರಿಕಾದ ಬೇಹುಗಾರಿಕಾ ಇಲಾಖೆಯು ತನಿಖೆ ನಡೆಸಿದೆ ಎಂದು ಇದೇ ವರ್ಷದ ಮೇ ತಿಂಗಳಲ್ಲಿ ಬಿಡುಗಡೆಯಾಗಲಿರುವ 'ಹೃದಯದ ಮಾತು' (Spoken from the Heart) ಎಂಬ ಪುಸ್ತಕದಲ್ಲಿ ಲಾರಾ ತಿಳಿಸಿದ್ದಾರೆ.

ಈ ಘಟನೆಯ ನಂತರ ಶೃಂಗಸಭೆಯಲ್ಲಿ ಪಾಲ್ಗೊಳ್ಳದ ಬುಶ್, ಚಿಕಿತ್ಸೆಗಾಗಿ ಹಾಸಿಗೆಯಲ್ಲೇ ಉಳಿಯಬೇಕಾಗಿತ್ತು. ಆಸ್ಪತ್ರೆಯ ವೈದ್ಯರ ಪ್ರಕಾರ ಅವರಿಗೆ ವೈರಸ್ ಒಂದರಿಂದ ತೊಂದರೆಯಾಗಿತ್ತು ಎಂದು ಟೈಮ್ಸ್ ವರದಿಯಲ್ಲಿ ಹೇಳಿದೆ.

ಅದೇ ಹೊತ್ತಿಗೆ ನಮ್ಮ ನಿಗೂಢತೆಯನ್ನು ಹೊತುಪಡಿಸಿ ಇತರ ಯಾವುದೇ ನಿಯೋಗಗಳು ಇದೇ ರೀತಿ ಅನಾರೋಗ್ಯಕ್ಕೊಳಗಾದ ಕುರಿತು ನಮಗೆ ಏನೂ ತಿಳಿದು ಬರಲಿಲ್ಲ ಎಂದು ಲಾರಾ ಬುಶ್ ಬರೆದುಕೊಂಡಿದ್ದಾರೆ.

1963ರ ನವೆಂಬರ್ ತಿಂಗಳಲ್ಲಿ ನಡೆದಿದ್ದ ಅಪಘಾತದ ಕುರಿತೂ ಅವರು ಬರೆದಿದ್ದಾರೆ. ಆಗ ಅವರಿಗೆ 17 ವರ್ಷ ವಯಸ್ಸಾಗಿತ್ತು. ಟೆಕ್ಸಾಸ್‌ನಲ್ಲಿ ನಡೆದಿದ್ದ ಈ ದುರ್ಘಟನೆಯಲ್ಲಿ ಕಾರಿನ ಚಕ್ರವು ಮತ್ತೊಂದು ಕಾರಿಗೆ ಬಡಿದಿತ್ತು ಪರಿಣಾಮ ಅದರ ಚಾಲಕ, ಕಾಲೇಜಿನ ಸಹಪಾಠಿ ಸಾವನ್ನಪ್ಪಿದ್ದ.
ಸಂಬಂಧಿತ ಮಾಹಿತಿ ಹುಡುಕಿ