ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಉಗ್ರ ಹಕಿಮುಲ್ಲಾ ಮೆಹ್ಸೂದ್ ಜೀವಂತವಾಗಿದ್ದಾನೆ: ಐಎಸ್ಐ (Hakimullah Mehsud | ISI | Pakistan | Taliban | America)
Bookmark and Share Feedback Print
 
ಕಳೆದ ವರ್ಷ ಬುಡಕಟ್ಟು ಪ್ರದೇಶದ ವಾಯುವ್ಯ ಪ್ರಾಂತ್ಯದಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಪಾಕಿಸ್ತಾನ್ ತಾಲಿಬಾನ್ ಮುಖ್ಯಸ್ಥ ಹಕಿಮುಲ್ಲಾ ಮೆಹ್ಸೂದ್ ಬದುಕುಳಿದಿದ್ದಾನೆ ಮತ್ತು ಆರೋಗ್ಯವಂತನಾಗಿದ್ದಾನೆ ಎಂದು ಐಎಸ್ಐ ಸ್ಪಷ್ಟಪಡಿಸಿದೆ.

ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ದಕ್ಷಿಣ ವಜಿರಿಸ್ತಾನದಲ್ಲಿ ಪಾಕಿಸ್ತಾನ ಮಿಲಿಟರಿ ಪಡೆ ಮತ್ತು ಅಮೆರಿಕ ಪಡೆ ಜಂಟಿಯಾಗಿ ನಡೆಸಿದ ಡ್ರೋನ್ ದಾಳಿಯಲ್ಲಿ ಮೆಹ್ಸೂದ್(32) ಸಾವನ್ನಪ್ಪಿರುವುದಾಗಿ ಪಾಕಿಸ್ತಾನದ ಮಾಧ್ಯಮವೊಂದು ಜನವರಿಯಲ್ಲಿ ವರದಿಯೊಂದನ್ನು ಬಿತ್ತರಿಸಿತ್ತು.

ಅಂತೂ ಸಾಕಷ್ಟು ಊಹಾಪೋಹದ ಬಳಿಕ ಮೆಹ್ಸೂದ್ ದಾಳಿಯಲ್ಲಿ ಸತ್ತಿರುವುದಾಗಿ ಪಾಕಿಸ್ತಾನ ಹೇಳಿತ್ತು. ಆದರೆ ಇದೀಗ ಡ್ರೋನ್ ದಾಳಿಯಲ್ಲಿ ಮೆಹ್ಸೂದ್ ಬದುಕುಳಿದಿರುವುದಾಗಿ ಹೇಳಿರುವ ಐಎಸ್ಐ, ಇದರಿಂದ ಸಿಐಎಗೆ ದೊಡ್ಡ ಹಿನ್ನಡೆ ಉಂಟಾದಂತಾಗಿದೆ.

ಶತಾಯಗತಾಯ ತಾಲಿಬಾನ್ ಯುವ ಮುಖ್ಯಸ್ಥ ಮೆಹ್ಸೂದ್‌ನನ್ನು ಹತ್ಯೆಗೈಯುವ ನಿಟ್ಟಿನಲ್ಲಿ ಅಮೆರಿಕ ಮತ್ತು ಪಾಕಿಸ್ತಾನ ಪಡೆ ವ್ಯವಸ್ಥಿತವಾಗಿ ದಾಳಿ ನಡೆಸಿತ್ತು. ಆದರೆ ಇದೀಗ ಮೆಹ್ಸೂದ್ ಡ್ರೋನ್ ದಾಳಿಯಲ್ಲಿ ಪ್ರಾಣಾಪಾಯದಿಂದ ಬದುಕುಳಿದಿದ್ದಾನೆ.

ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಗಡಿಭಾಗದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಖಾಯಿದಾ ಮತ್ತು ತಾಲಿಬಾನ್ ಉಗ್ರರನ್ನು ಮಟ್ಟಹಾಕಬೇಕೆಂದು ಅಮೆರಿಕ ಒತ್ತಡ ಹೇರುತ್ತಲೇ ಬಂದಿತ್ತು.

ಮೆಹ್ಸೂದ್ ಪೇಶಾವರ ಮತ್ತು ಖೈಬರ್ ಬುಡಕಟ್ಟು ಪ್ರದೇಶದಲ್ಲಿ ನ್ಯಾಟೋ ಪಡೆಗಳ ಮೇಲೆ ದಾಳಿ, ದಕ್ಷಿಣ ವಜಿರಿಸ್ತಾನದಲ್ಲಿ 200ಪಾಕಿಸ್ತಾನಿ ಸೈನಿಕರ ಅಪಹರಣ, ಹಲವು ಹತ್ಯೆ ಪ್ರಕರಣಗಳ ಪ್ರಮುಖ ರೂವಾರಿಯಾಗಿದ್ದ. ಆ ನಿಟ್ಟಿನಲ್ಲಿ ಮೆಹ್ಸೂದ್ ಹತ್ಯೆಗೆ ಅಮೆರಿಕ ಸೈನಿಕ ಪಡೆ ಪಣ ತೊಟ್ಟಿತ್ತು.
ಸಂಬಂಧಿತ ಮಾಹಿತಿ ಹುಡುಕಿ