ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಿರಿಯನ ಜತೆ ಮಹಿಳೆ ರೊಮ್ಯಾನ್ಸ್ ಮಾಡಿದ್ರೆ ಚಿರ ಯೌವ್ವನ! (Toyboy romance | women feel younger | Women | Girls)
Bookmark and Share Feedback Print
 
ದಿನದಿಂದ ದಿನಕ್ಕೆ ಯೌವ್ವನ ಪುಟಿಯುತ್ತಿರುವುದನ್ನು ಎದುರು ನೋಡುತ್ತಿರುವ ಆಶಾವಾದಿ ಮಹಿಳೆ ನೀವಾಗಿದ್ದರೆ ನಿಮಗಿಂತ ಕಡಿಮೆ ವಯಸ್ಸಿನ ಹುಡುಗನನ್ನು ಸಂಗಾತಿಯನ್ನಾಗಿ ಆರಿಸಿಕೊಳ್ಳಿ -- ಹೀಗೆಂದು ಹೇಳಿರುವುದು ನೂತನ ಸಮೀಕ್ಷೆ.

ಅದರ ಪ್ರಕಾರ ಯಾವ ಮಹಿಳೆ ತನಗಿಂತ ಜೂನಿಯರ್ ಯುವಕನನ್ನು ಆರಿಸಿಕೊಳ್ಳುತ್ತಾಳೋ, ಆಕೆ ಹೊರಾಂಗಣ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾಳೆ ಮತ್ತು ಸ್ಫೂರ್ತಿ ಹುಟ್ಟಿಸುವ ಜವ್ವನಿಗರ ಹವ್ಯಾಸಗಳನ್ನು ಹೊಂದಿರುವ ವ್ಯಕ್ತಿಗಳ ಜತೆ ಬೆರೆಯುತ್ತಾಳೆ.

'ಟಾಯ್‌ಬಾಯ್.ಕಾಮ್' ಎಂಬ ವೆಬ್‌ಸೈಟ್ ಈ ಅಧ್ಯಯನ ನಡೆಸಿದೆ. 'ಒಬ್ಬ ತನಗಿಂತ ವಯಸ್ಸಿನಲ್ಲಿ ಕಿರಿಯವನಾದ ಯುವಕನನ್ನು ಯುವತಿಯೊಬ್ಬಳು ಮದುವೆಯಾದರೆ ಆಕೆ ಸುಖವಾಗಿರುತ್ತಾಳೆ ಎಂಬುದು ಸಾಮಾನ್ಯ ನಂಬಿಕೆಯಾಗಿತ್ತು. ನಾವೀಗ ಅದನ್ನು ಸತ್ಯವೆಂದು ತೋರಿಸಿಕೊಟ್ಟಿದ್ದೇವೆ' ಎಂದು ಈ ಟಾಯ್‌ಬಾಯ್ ಡೇಟಿಂಗ್ ಸೈಟ್ ವಕ್ತಾರರು ತಿಳಿಸಿದ್ದಾರೆ.

ಈ ನಿಲುವಿಗೆ ಬರುವ ಮೊದಲು ಯುವ ಸಂಗಾತಿಗಳನ್ನು ಹೊಂದಿದ್ದ 18ರಿಂದ 65 ವರ್ಷಗಳ ನಡುವಿನ ಸುಮಾರು 1000 ಮಹಿಳೆಯರ ಅಭಿಪ್ರಾಯವನ್ನು ಪಡೆಯಲಾಗಿದೆ. ಅಂಕಿ-ಅಂಶಗಳ ಪ್ರಕಾರ ಒಟ್ಟಾರೆ ವಯಸ್ಸಿನ ಅಂತರದ ಸರಾಸರಿ ನಾಲ್ಕು ವರ್ಷಗಳು. ಅಂದರೆ ಯುವತಿ 30 ವರ್ಷದವಳಾಗಿದ್ದರೆ, ಆಕೆಯ ಸಂಗಾತಿಗೆ 26 ವರ್ಷ.

ಅದೇ ಹೊತ್ತಿಗೆ ತನಗಿಂತ ಕಿರಿಯ ವಯಸ್ಸಿನ ಹುಡುಗನಿಂದಾಗಿ ದಶಕದಷ್ಟು ಯೌವ್ವನವನ್ನು ಪಡೆದುಕೊಂಡಿದ್ದೇನೆ ಹತ್ತರಲ್ಲೊಬ್ಬರಂತೆ ಹಲವರು ಹೇಳಿಕೊಂಡಿದ್ದಾರೆ ಎಂದು 'ದಿ ಡೈಲಿ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ತನಗಿಂತ ಹಿರಿಯ ಪುರುಷನನ್ನು ಮದುವೆಯಾದರೆ ಏನಾಗುತ್ತದೆ ಎಂಬ ಪ್ರಶ್ನೆಗೆ, ಆತ ಹೆಚ್ಚಾಗಿ 'ಆನೆ ನಡೆದದ್ದೇ ದಾರಿ' ಎಂಬಂತಿರುತ್ತಾನೆ ಮತ್ತು ಸದಾ ಗೊಣಗಾಡುತ್ತಾ ರೇಗುತ್ತಿರುತ್ತಾನೆ ಎಂಬ ಸಾಮಾನ್ಯ ಉತ್ತರ ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ