ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಾರ್ವಜನಿಕ ಸ್ಥಳದಲ್ಲಿ ಬುರ್ಖಾ ನಿಷೇಧ: ಬೆಲ್ಜಿಯಂ ಸಂಸತ್ ಅಸ್ತು (Brussels | burqa | ban wearing | Belgian | Islamic burqa)
Bookmark and Share Feedback Print
 
ಸಾರ್ವಜನಿಕ ಸ್ಥಳದಲ್ಲಿ ಬುರ್ಖಾ ಧರಿಸಲು ನಿಷೇಧಿಸುವ ಕಾಯ್ದೆ ಪರವಾಗಿ ಕೊನೆಗೂ ಬೆಲ್ಜಿಯಂ ಸಂಸತ್‌ನಲ್ಲಿ ಸಂಸದರು ಮತಚಲಾಯಿಸುವ ಮೂಲಕ ಯುರೋಪ್ ರಾಷ್ಟ್ರಗಳಲ್ಲಿ ಬುರ್ಖಾ ಧರಿಸಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬೆಲ್ಜಿಯಂ ಸಂಸತ್‌ನ ಲೋವರ್ ಹೌಸ್‌ನಲ್ಲಿ ಬುರ್ಖಾ ನಿಷೇಧ ಕಾಯ್ದೆ 136 ಪರವಾಗಿ ಮತ ಬಿದ್ದಿತ್ತು. ಅದರಲ್ಲಿ ಇಬ್ಬರು ಸಂಸದರು ಗೈರು ಹಾಜರಾಗಿದ್ದರು. ಆದರೆ ಯಾರೊಬ್ಬರು ಕಾಯ್ದೆಗೆ ವಿರೋಧವಾಗಿ ಮತ ಚಲಾಯಿಸಿಲ್ಲ.

ಬುರ್ಖಾ ಧರಿಸುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಗುರುತು ಪತ್ತೆ ಹಚ್ಚುವುದು ಅಸಾಧ್ಯವಾಗುತ್ತದೆ ಎಂಬ ನಿಟ್ಟಿನಲ್ಲಿ, ಬೀದಿ, ಸಾರ್ವಜನಿಕ ಉದ್ಯಾನವನ ಮತ್ತು ಆಟದ ಮೈದಾನ ಅಥವಾ ಕಟ್ಟಡ...ಒಟ್ಟಾರೆ ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಮ್ ಮಹಿಳೆಯರು ಬುರ್ಖಾ ಧರಿಸುವುದಕ್ಕೆ ನಿಷೇಧ ಹೇರಲಾಗಿದೆ ಎಂಬ ಅಂಶ ಮಸೂದೆಯಲ್ಲಿ ಅಡಕವಾಗಿದೆ.

ಆದರೆ ವಿಶೇಷ ಹಬ್ಬದ ಸಂದರ್ಭದಲ್ಲಿ ಮುನ್ಸಿಪಲ್ ಅಧಿಕಾರಿಗಳು ಒಪ್ಪಿಗೆ ನೀಡಿದಲ್ಲಿ ಬುರ್ಖಾ ಧರಿಸಲು ಅವಕಾಶ ನೀಡಬಹುದಾಗಿದೆ ಎಂಬುದಾಗಿ ಮಸೂದೆಯಲ್ಲಿ ತಿಳಿಸಿದೆ.

ಒಂದು ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿರುವುದು ಕಂಡು ಬಂದಲ್ಲಿ 15-25 ಯುರೋ ( 20-34ಡಾಲರ್) ದಂಡ ಅಥವಾ ಏಳು ದಿನಗಳ ಕಾಲ ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ