ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇಟಲಿ: ಉಗ್ರ ಕೃತ್ಯ- ಮಾಜಿ ಇಮಾಮ್‌ ಜೈಲಿಗೆ (Imam | Italy | terrorism | Egypt | Jenner mosque)
Bookmark and Share Feedback Print
 
ಭಯೋತ್ಪಾದನೆ ಆರೋಪದ ಮೇಲೆ ಬಂಧಿತನಾಗಿರುವ ಈಜಿಪ್ಟ್ ಮೂಲದ ಇಮಾಮ್‌ಗೆ ಇಟಲಿ ಸುಪ್ರೀಂಕೋರ್ಟ್ ಜೈಲು ಶಿಕ್ಷೆ ವಿಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮಿಲಾನ್‌ನ ವಿಯಾಲೆ ಜೆನ್ನೆರ್ ಮಸೀದಿಯ ಮಾಜಿ ಇಮಾಮ್ ಆಗಿರುವ ಅಬು ಇಮಾದ್, ಆತ್ಮಹತ್ಯೆ ಬಾಂಬರ್‌ಗಳ ನೇಮಕ ಮತ್ತು ಮಿಲಾನ್ ಹಾಗೂ ಲ್ಯಾಂಬ್ರಡೈ ಪ್ರದೇಶದಿಂದ ಕಾನೂನು ಬಾಹಿರವಾಗಿ ವಲಸಿಗರ ಸಾಗಾಟ ಮಾಡುತ್ತಿರುವ ಆರೋಪ ಎದುರಿಸುತ್ತಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಬು ಇಮಾದ್‌ಗೆ 2007ರ ಡಿಸೆಂಬರ್ ತಿಂಗಳಿನಲ್ಲಿ ಮಿಲಾನ್ ಕೋರ್ಟ್ ನೀಡಿದ್ದ ಜೈಲುಶಿಕ್ಷೆ ತೀರ್ಪನ್ನು ಇಟಲಿಯ ಅಫೀಲ್ಸ್ ಕೋರ್ಟ್ ಬುಧವಾರ ಎತ್ತಿ ಹಿಡಿದಿದೆ. ಆ ನಿಟ್ಟಿನಲ್ಲಿ ಭಯೋತ್ಪಾದನೆ ಆರೋಪದ ಮೇಲೆ ಭಯೋತ್ಪಾದನೆ ಕಾಯ್ದೆಯಡಿ ಇಮಾದ್‌ಗೆ ಮೂರು ವರ್ಷ ಎಂಟು ತಿಂಗಳ ಕಾಲ ಜೈಲುಶಿಕ್ಷೆ ವಿಧಿಸಿದೆ.

ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹತ್ತು ಮಂದಿಗೆ ಜೈಲುಶಿಕ್ಷೆ ಆಗಿದ್ದು, ಅವರೆಲ್ಲಾ 2ರಿಂದ ಹತ್ತು ವರ್ಷಗಳ ಕಾಲದ ಜೈಲುಶಿಕ್ಷೆಗೆ ಗುರಿಯಾಗಿದ್ದಾರೆ. ನಾಲ್ಕು ಮಂದಿ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ