ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಉಗ್ರರ ಜತೆ ನಂಟು; ಫ್ರಾನ್ಸ್‌ನಲ್ಲಿ 3ರ ಬಾಲಕನ ಬಂಧನ (France | Paris | Police | Terror)
Bookmark and Share Feedback Print
 
ಶಂಕಿತ ಭಯೋತ್ಪಾದಕನೆಂಬ ನೆಲೆಯಲ್ಲಿ ಮೂರರ ಹರೆಯದ ಬಾಲಕ ಮತ್ತು ಆತನ ತಂದೆಯನ್ನು ಫ್ರಾನ್ಸ್‌ನಲ್ಲಿ ಬಂಧಿಸಲಾಗಿದೆ. ಆದರೆ ಈ ಬಾಲಕ ರಚ್ಚೆ ಹಿಡಿದು ಕೂಗಲಾರಂಭಿಸಿದ್ದರಿಂದ ಆತನನ್ನು ನಂತರ ಬಿಡುಗಡೆ ಮಾಡಲಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಪ್ಯಾರಿಸ್‌ ಉಪನಗರ ಜುವಿಸಿಯ ಅಕ್ರಮ ವಲಸಿಗನಾಗಿರುವ ಬಾಲಕ ಮತ್ತು ಆತನ ತಂದೆ ಕಳೆದ ವಾರ ವಿಶ್ರಾಂತಿ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಕಾರಿನತ್ತ ಹಿಂತಿರುಗುತ್ತಿದ್ದ ವೇಳೆ ಬಂಧಿಸಲಾಗಿದೆ ಎಂದು 'ಡೈಲಿ ಮೇಲ್' ಪತ್ರಿಕೆ ವರದಿ ಮಾಡಿದೆ.

ವಾಹನಗಳ ದೈನಂದಿನ ತಪಾಸಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಕ ಹಾಗೂ ಆತನ ತಂದೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದ ನಂತರದ 20 ನಿಮಿಷದೊಳಗೆ ಅವರಿಬ್ಬರನ್ನು ಬೇರ್ಪಡಿಸಲಾಯಿತು. ನಂತರ ಉಗ್ರಗಾಮಿ ಸಂಘಟನೆಯೊಂದಿಗೆ ನಂಟಿನ ಶಂಕೆ ಹಿನ್ನೆಲೆಯಲ್ಲಿ ಬಾಲಕನ ತಂದೆಯನ್ನು ವಿಚಾರಣೆಗೊಳಪಡಿಸಲಾಯಿತು. ಇಬ್ಬರನ್ನೂ ವಿಚಾರಣೆಯ ಅಡಿಯಲ್ಲಿ ಇಡಲು ನಿರ್ಧರಿಸಲಾಯಿತು. ಸುಮಾರು ಎರಡು ತಾಸುಗಳ ನಂತರ ಬಾಲಕನನ್ನು ಬಿಡುಗಡೆ ಮಾಡಲಾಯಿತು.

ಆತ ನಿದ್ದೆ ಮಾಡದೆ ನಿರಂತರವಾಗಿ ಅಳುತ್ತಿದ್ದ. ಪುಟ್ಟ ಬಾಲಕ ತೀವ್ರ ಭೀತಿಗೊಳಗಾಗಿದ್ದ. ಇಡೀ ಪ್ರಸಂಗವು ಆತನಿಗೆ ದುಸ್ವಪ್ನವಾಗಿತ್ತು. ಪೊಲೀಸರು ಹೀಗೆ ನಡೆಸಿಕೊಳ್ಳಬಾರದಿತ್ತು ಎಂದು ಸ್ಥಳೀಯ ಸಾಮಾಜಿಕ ಸಂಘಟನೆಗಳು ಅಭಿಪ್ರಾಯಪಟ್ಟಿವೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ