ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮೆಹ್ಸೂದ್ ಪಾಕಿಸ್ತಾನಿ ತಾಲಿಬಾನ್ ಮುನ್ನಡೆಸುತ್ತಿಲ್ಲ: ಅಮೆರಿಕಾ (Hakimullah Mehsud | Pakistani Taliban | Geoff Morrell | USA)
Bookmark and Share Feedback Print
 
ಹಕೀಮುಲ್ಲಾ ಮೆಹ್ಸೂದ್ ಸತ್ತಿರುವ ಸುದ್ದಿ ನಿಜವಲ್ಲ, ಆತ ಬದುಕಿದ್ದಾನೆ ಎಂದು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಹೇಳಿದ ಬೆನ್ನಿಗೆ ಪ್ರತಿಕ್ರಿಯಿಸಿರುವ ಅಮೆರಿಕಾ ರಕ್ಷಣಾ ಸಚಿವಾಲಯವು, ಮೆಹ್ಸೂದ್ ಪಾಕಿಸ್ತಾನಿ ತಾಲಿಬಾನ್ ಭಯೋತ್ಪಾದಕ ಸಂಘಟನೆಯನ್ನು ಮುನ್ನಡೆಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

ಬೈತುಲ್ಲಾ ಮೆಹ್ಸೂದ್ ಕಾಲಾನಂತರ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದ ಹಕೀಮುಲ್ಲಾ, ಇದೇ ವರ್ಷಾರಂಭದಲ್ಲಿ ಅಮೆರಿಕಾ ನಡೆಸಿದ್ದ ಡ್ರೋನ್ ದಾಳಿಯಲ್ಲಿ ಸತ್ತಿದ್ದಾನೆ ಎಂದು ಹೇಳಲಾಗಿತ್ತು.

ಪಾಕಿಸ್ತಾನ ತಾಲಿಬಾನನ್ನು ಈ ಹಿಂದೆ ಮುನ್ನಡೆಸಿದ್ದ ನೀವು ಈಗ ಪ್ರಸ್ತಾಪಿಸುತ್ತಿರುವ ವ್ಯಕ್ತಿ ಪ್ರಸಕ್ತ ಸಂಘಟನೆಯನ್ನು ಮುನ್ನಡೆಸುತ್ತಿದ್ದಾನೆ ಅಥವಾ ಅಧಿಕಾರ ಚಲಾಯಿಸುತ್ತಿದ್ದಾನೆ ಎಂದು ಖಚಿತವಾಗಿ ಹೇಳಲು ನನ್ನಲ್ಲಿ ಯಾವುದೇ ಪುರಾವೆಗಳಿಲ್ಲ ಎಂದು ಪೆಂಟಗನ್ ವಕ್ತಾರ ಜೆಫ್ ಮೊರೆಲ್ ಪತ್ರಕರ್ತರ ಜತೆ ಮಾತನಾಡುತ್ತಾ ತಿಳಿಸಿದ್ದಾರೆ.

ಮೆಹ್ಸೂದ್ ಬದುಕಿದ್ದಾನಾ ಅಥವಾ ಸಾವನ್ನಪ್ಪಿದ್ದಾನಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಆತ ಜೀವಂತವಾಗಿದ್ದಾನೆ ಅಥವಾ ಸತ್ತಿದ್ದಾನೆ ಎಂಬುದನ್ನು ಪ್ರತಿಬಿಂಬಿಸುತ್ತಿದೆಯೋ ಇಲ್ಲವೋ ನನಗೆ ತಿಳಿದಿಲ್ಲ. ಆದರೆ ಆತ ಪಾಕಿಸ್ತಾನಿ ತಾಲಿಬಾನನ್ನು ಮುನ್ನಡೆಸುತ್ತಿಲ್ಲ ಎನ್ನುವುದು ಮಾತ್ರ ಸ್ಪಷ್ಟ ಎಂದರು.
ಸಂಬಂಧಿತ ಮಾಹಿತಿ ಹುಡುಕಿ