ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮನಮೋಹನ್ ಸಿಂಗ್, ಸಚಿನ್ ಪ್ರಭಾವಿ ವ್ಯಕ್ತಿಗಳು: ಟೈಮ್ಸ್ (Time magazine | Manmohan Singh | Aishwarya Rai Bachchan | Sachin Tendulkar)
Bookmark and Share Feedback Print
 
ಟೈಮ್ಸ್ ಮ್ಯಾಗಜಿನ್‌ ವಾರ್ಷಿಕವಾಗಿ ಬಿಡುಗಡೆಗೊಳಿಸುತ್ತಿರುವ ಅತೀ ಪ್ರಭಾವಿ ವ್ಯಕ್ತಿ-100ರ ಪಟ್ಟಿಯಲ್ಲಿ ಭಾರತ ಪ್ರಧಾನಿ ಮನಮೋಹನ್ ಸಿಂಗ್, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ನೊಬೆಲ್ ಪ್ರಶಸ್ತಿ ವಿಜೇಯ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೆನ್ ಸೇರಿದಂತೆ ಒಂಬತ್ತು ಗಣ್ಯ ವ್ಯಕ್ತಿಗಳು ಸ್ಥಾನ ಪಡೆದಿದ್ದಾರೆ.

ನೇತ್ರ ತಜ್ಞ ಪೆರುಮಲಸ್ವಾಮಿ ನಮ್‌ಪೆರುಮಲಸಾಮ್, ಮಾನವ ಹಕ್ಕು ಹೋರಾಟಗಾರ ಸಂಜಿತ್ ಬುಕರ್ ರಾಯ್, ಬರಹಗಾರ ಚೇತನ್ ಭಗತ್, ಇಂಡೋ-ಅಮೆರಿಕಾ ವೈದ್ಯ ಹಾಗೂ ಹಾರ್ವಡ್ ಪ್ರೊಫೆಸರ್ ಅತುಲ್ ಗ್ವಾಂಡೆ, ಟೊರಂಟೊದ ವೈದ್ಯಸಹಾಯಕ ರಾಹುಲ್ ಸಿಂಗ್ ಮತ್ತು ಮನೋರಂಜಕ ಕಿರಣ್ ಮುಜುಂದಾರ್ ಷಾರವರು ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡ ಇತರ ಭಾರತೀಯರಾಗಿದ್ದಾರೆ.

ಅಲ್ಲದೇ ಬಾಲಿವುಡ್ ಖ್ಯಾತ ನಟಿ ಐಶ್ವರ್ಯ ರೈ ಬಚ್ಚನ್ ಇತರ ನೂರು ಮಂದಿ ಪೂರ್ವ ವಿದ್ಯಾರ್ಥಿನಿಯರ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಟೈಮ್ಸ್‌ನ ಪೂರ್ವ ವಿದ್ಯಾರ್ಥಿನಿ ಐಶ್ವರ್ಯ ಅವರ ಪ್ರಿಯವಾದ ಪುಸ್ತಕ ದ ಅಲ್ ಕೆಮಿಸ್ಟ್, ನನ್ನ ತಾಯಿ ಮತ್ತು ತಂದೆ ತಮ್ಮ ಮೇಲೆ ಹೆಚ್ಚು ಪ್ರಭಾವ ಬೀರಿದವರು ಎಂದು ಅವರು ಹೇಳಿದ್ದಾರೆ.

ಆರ್ಥಿಕತೆಯನ್ನು ಉದಾರಿಕರಣಗೊಳಿಸುವಿಕೆ ಹಾಗೂ ದೇಶವನ್ನು ವಿಶ್ವದ ಪ್ರಮುಖ ದೇಶಗಳ ಸಾಲಿಗೆ ನಿಲ್ಲಿಸುವಲ್ಲಿ ಮನಮೋಹನ್ ಸಿಂಗ್‌ ವಹಿಸಿದ ಪಾತ್ರವನ್ನು ಮ್ಯಾಗಜಿನ್ ಗುರುತಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ