22 ಪರಿಷ್ಕರಣಾಲಯ ನಾಶ
ಕೊಲಂಬಿಯಾ:ಮಾದಕ ವಸ್ತುಗಳನ್ನು ಪರಿಷ್ಕರಿಸುತ್ತಿದ್ದ ಕೊಲಂಬಿಯಾ ಕಾಡಿನಲ್ಲಿನ 22 ಪ್ರಯೋಗಾಲಯಗಳನ್ನು ಪೊಲೀಸರು ಮತ್ತು ಸಶಸ್ತ್ರ ಪಡೆಗಳು ನಾಶಪಡಿಸಿವೆ. ಒಂದು ಟನ್‌ಗೂ ಹೆಚ್ಚಿನ ಪ್ರಮಾಣದ ಕೊಕೈನ್, ಮಾದಕ ವಸ್ತುಗಳ ಸಂಸ್ಕರಣೆ ರಾಸಾಯನಿಕ ಪತ್ತೆ ಹಚ್ಚಿ ನಾಶಪಡಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.