ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಉಗ್ರರಿಂದ ನನ್ನ ಪ್ರಾಣ ಉಳಿಸಿ: ಅಪಹೃತ ರಾಯಭಾರಿ (Aghanistan | ambassador | Islamabad | Khaliq Farahi | kidnapped)
Bookmark and Share Feedback Print
 
ಪೇಶಾವರದ ವಾಯುವ್ಯ ಭಾಗದಿಂದ ಉಗ್ರರಿಂದ ಅಪಹರಣಕ್ಕೊಳಗಾದ ಪಾಕಿಸ್ತಾನದ ಅಫ್ಘಾನ್ ರಾಯಭಾರಿ ಅಬ್ದುಲ್ ಖಾಲಿಕ್ ಫಾರಾಹಿ, ಶೀಘ್ರವೇ ಉಗ್ರರ ಬೇಡಿಕೆಯನ್ನು ಈಡೇರಿಸಿ ತನ್ನ ಪ್ರಾಣ ಉಳಿಸುವಂತೆ ಅಫ್ಘಾನ್ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿರುವ ವೀಡಿಯೋವೊಂದನ್ನು ಭಾನುವಾರ ಉಗ್ರರು ಅಫ್ಘಾನ್ ಅಧಿಕಾರಿಗಳಿಗೆ ಕಳುಹಿಸಿದ್ದಾರೆ.

ಉಗ್ರಗಾಮಿ ಸಂಘಟನೆಯ ಕಾಟೀಬಾ ಸಲಾಲುದ್ದೀನ್ ಅಯ್ಯುಬಿ, ವೀಡಿಯೊವನ್ನು ವಜಿರಿಸ್ತಾನ್ ಬುಡಕಟ್ಟು ಪ್ರದೇಶ ಅಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದು, ಫಾರಾಹ ಅಪಹರಣಕ್ಕೆ ತಾವೇ ಹೊಣೆ ಎಂಬುದಾಗಿಯೂ ಹೇಳಿಕೊಂಡಿದ್ದಾನೆ.

2008ರಲ್ಲಿ ಪೇಶಾವರದ ಹಾಯತಾಬಾದ್‌ನಿಂದ ಫಾರಾಹಿ(53)ಯನ್ನು ಶಸ್ತ್ರ ಸಜ್ಜಿತ ಉಗ್ರರು ಅಪಹರಿಸಿದ್ದರು. ಈ ಸಂದರ್ಭದಲ್ಲಿ ರಾಯಭಾರಿಯಾಗಿದ್ದ ಫಾರಾಹಿ ಕಾರಿನ ಚಾಲಕನನ್ನು ಗುಂಡಿಕ್ಕಿ ಹತ್ಯೆಗೈದಿದ್ದರು.

ದಯವಿಟ್ಟು ನನ್ನ ಪ್ರಾಣ ರಕ್ಷಿಸಿ: ನಾನು ಅಬ್ದುಲ್ ಖಾಲಿಕ್ ಫಾರಾಹಿ, ಪ್ರಿಯ ಅಧಿಕಾರಿಗಳೇ, ನಿಮಗೆ ಗೊತ್ತು ನಾನು ಕಳೆದ ಒಂದೂವರೆ ವರ್ಷದಿಂದ ಉಗ್ರರ ಒತ್ತೆಯಾಳಾಗಿದ್ದೇನೆ. ನಾನು ನನ್ನ ದಿನಗಳನ್ನು ತುಂಬಾ ಕಠಿಣ ಪರಿಸ್ಥಿತಿಯಲ್ಲಿ ಕಳೆಯುತ್ತಿದ್ದೇನೆ ಎಂದು ವೀಡಿಯೋದಲ್ಲಿ ಅಲವತ್ತುಕೊಂಡಿದ್ದಾರೆ.

ಅಲ್ಲದೇ ಆ ನಿಟ್ಟಿನಲ್ಲಿ ನಾನು ಪಾಕಿಸ್ತಾನ ಸರ್ಕಾರ ಮತ್ತು ಅಫ್ಘಾನ್, ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ನೀವು ಶೀಘ್ರವೇ ಉಗ್ರರ ಬೇಡಿಕೆಯನ್ನು ಈಡೇರಿಸಿ ನನ್ನ ಪ್ರಾಣವನ್ನು ಉಳಿಸಿ. ನಾನು ಅಮೆರಿಕ ಬೆಂಬಲಿತ ಅಫ್ಘಾನ್ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಿರುವುದಾಗಿ ಆರೋಪಿಸಿದ್ದು, ಇದಕ್ಕೆ ಮರಣದಂಡನೆ ಶಿಕ್ಷೆ ನೀಡುವುದಾಗಿ ಘೋಷಿಸಿವೆ. ಒಟ್ಟಿನಲ್ಲಿ ಉಗ್ರರ ಬೇಡಿಕೆ ಈಡೇರಿಸಿ ನನ್ನ ಜೀವ ರಕ್ಷಿಸಿ ಎಂದು ರಾಯಭಾರಿ ಕೊನೆಯ ಮನವಿ ಮಾಡಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ