ಇಲ್ಲಿನ ಟೈಮ್ಸ್ ಸ್ಕ್ವೇರ್ ಸಮೀಪ ಶನಿವಾರ ಕಾರ್ ಬಾಂಬ್ ಸ್ಫೋಟಿಸಲು ಯತ್ನ ನಡೆಸಿ ವಿಫಲರಾಗಿರುವ ಘಟನೆಯ ಹಿಂದೆ ಅಲ್ ಖಾಯಿದಾ ಸಂಘಟನೆ ಕೈವಾಡ ಇಲ್ಲ ಎಂದು ನ್ಯೂಯಾರ್ಕ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಕುರಿತಂತೆ ತೀವ್ರ ತನಿಖೆ ನಡೆಸಲಾಗುತ್ತಿದ್ದು, ಆ ನಿಟ್ಟಿನಲ್ಲಿ ಬಾಂಬ್ ಸ್ಫೋಟ ನಡೆಸಲು ಉದ್ದೇಶಿಸಿರುವ ಸಂಚಿನ ಹಿಂದೆ ಅಲ್ ಖಾಯಿದಾ ಅಥವಾ ಇನ್ಯಾವುದೇ ಪ್ರಮುಖ ಉಗ್ರಗಾಮಿ ಸಂಘಟನೆಗಳ ಕೈವಾಡ ಇರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ ಎಂದು ಮೇಯರ್ ಮೈಕೆಲ್ ಬ್ಲೂಮ್‌ಬೆರ್ಗ್ ಹೇಳಿದ್ದಾರೆ.
ಆದರೆ ಈ ಘಟನೆ ಕುರಿತಂತೆ ನಾವು ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಘಟನೆಯಿಂದ ನ್ಯೂಯಾರ್ಕ್ ಜನರು ಭಯಭೀತರಾಗಿಲ್ಲ. ಇಲ್ಲಿನ ಜನರು ತುಂಬಾ ಸುರಕ್ಷಿತರಾಗಿದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಅಲ್ಲದೇ ಘಟನೆಯ ಹಿಂದೆ ಪಾಕಿಸ್ತಾನ್ ತಾಲಿಬಾನ್ ಕೈವಾಡ ಇರುವ ಬಗ್ಗೆಯೂ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ನ್ಯೂಯಾರ್ಕ್ ಪೊಲೀಸ್ ಕಮೀಷನರ್ ರೇಮಂಡ್ ಕೆಲ್ಲೆ ಭಾನುವಾರ ಸ್ಪಷ್ಟಪಡಿಸಿದ್ದರು.