ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕದ ಮೇಲೆ ದಾಳಿ ಮಾಡಿಯೇ ಸಿದ್ದ: ಮೆಹ್ಸೂದ್ ಶಪಥ (Taliban | Pakistan | Hakimullah Mehsud | fidaeen | America)
Bookmark and Share Feedback Print
 
ಅಮೆರಿಕದ ಮೇಲೆ ದಾಳಿ ನಡೆಸಿಯೇ ಸಿದ್ದ ಎಂದು ಪಾಕಿಸ್ತಾನಿ ತಾಲಿಬಾನ್ ಮುಖಂಡ ಹಕೀಮುಲ್ಲಾ ಮೆಹ್ಸೂದ್ ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆ ಮಾಡಿರುವ ನೂತನ ವೀಡಿಯೊದಲ್ಲಿ ಶಪಥಗೈದಿದ್ದು, ಮೆಹ್ಸೂದ್ ಅಮೆರಿಕ ನಡೆಸಿದ್ದ ಡ್ರೋನ್ ದಾಳಿಯಲ್ಲಿ ಕಳೆದ ಜನವರಿ ತಿಂಗಳಿನಲ್ಲಿ ಸಾವನ್ನಪ್ಪಿದ್ದ ಎಂದು ನಂಬಲಾಗಿತ್ತು.

ಅಮೆರಿಕದ ಪ್ರಮುಖ ನಗರಗಳಲ್ಲಿ ನಮ್ಮ ಆತ್ಮಾಹುತಿ ದಳಗಳು ದಾಳಿ ನಡೆಸುವ ಸಮಯ ತುಂಬಾ ಹತ್ತಿರವಾಗುತ್ತಿದೆ ಎಂದು ಮೆಹ್ಸೂದ್ ಇಂಟರ್ನೆಟ್ ವೀಡಿಯೋದಲ್ಲಿ ಎಚ್ಚರಿಸಿದ್ದು, ಈ ವೀಡಿಯೋವನ್ನು ಏಪ್ರಿಲ್ 4ರಂದು ಮಾಡಲಾಗಿತ್ತು ಎಂದು ವೆಬ್ ಸೈಟ್ ಹೇಳಿದೆ.

ಜನವರಿ ತಿಂಗಳಿನಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಮೆಹ್ಸೂದ್ ಸಾವನ್ನಪ್ಪಿರುವುದಾಗಿ ಮಾಧ್ಯಮಗಳ ವರದಿ ತಿಳಿಸಿತ್ತು. ಅಲ್ಲದೇ ಪಾಕಿಸ್ತಾನ ಕೂಡ ಮೆಹ್ಸೂದ್ ಸಾವನ್ನು ಖಚಿತಪಡಿಸಿತ್ತು. ಆದರೆ ಇತ್ತೀಚೆಗೆ ದಿಢೀರನೆ ಪಾಕಿಸ್ತಾನದ ಕೆಲವು ಮಾಧ್ಯಮಗಳು, ಅಮೆರಿಕ ಡ್ರೋನ್ ದಾಳಿಯಲ್ಲಿ ಮೆಹ್ಸೂದ್ ಸಾವನ್ನಪ್ಪಿಲ್ಲ ಎಂದು ಪಾಕ್ ಐಎಸ್ಐ ತಿಳಿಸಿರುವುದಾಗಿ ಹೇಳಿ ವರದಿ ಪ್ರಕಟಿಸಿವೆ.

ಅದೇ ರೀತಿ ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ಕಾರ್ ಬಾಂಬ್ ಸ್ಫೋಟಕ್ಕೆ ವಿಫಲ ಯತ್ನ ನಡೆಸಿರುವ ಘಟನೆ ಹಿಂದೆ ತೆಹ್ರೀಕ್ ಇ ತಾಲಿಬಾನ್ ಸಂಘಟನೆ ಕೈವಾಡ ಇರುವುದಾಗಿ ಮತ್ತೊಂದು ವೀಡಿಯೋದಲ್ಲಿ ಹೊಣೆಹೊತ್ತುಕೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ