ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್: ಹೆಣ್ಮಕ್ಕಳ ಶಾಲೆ ಆಯ್ತು, ಈಗ ಬಾಲಕರ ಶಾಲೆ ಧ್ವಂಸ (Taliban | blown up | female teachers | Girls School,)
Bookmark and Share Feedback Print
 
ಇಲ್ಲಿನ ನಾರ್ತ್ ವೆಸ್ಟ್ ಫ್ರಾಂಟಿಯರ್ ಪ್ರದೇಶದಾದ್ಯಂತ ಹುಡುಗಿಯರ ಶಾಲೆಗಳನ್ನು ಧ್ವಂಸಗೊಳಿಸಿದ ನಂತರ ಇದೀಗ ತಾಲಿಬಾನ್ ಉಗ್ರರು ಬಾಜುರ್ ಪ್ರದೇಶದ ಟೆಹ್‌ಸಿಲ್‌ನಲ್ಲಿ ಎರಡು ಬಾಲಕರ ಶಾಲೆಗಳನ್ನು ಧ್ವಂಸಮಾಡಿರುವ ಘಟನೆ ನಡೆದಿದ್ದು, ಇದರೊಂದಿಗೆ ಈ ಪ್ರದೇಶದಲ್ಲಿ ಧ್ವಂಸಗೊಂಡ ಶಾಲೆಗಳ ಸಂಖ್ಯೆ 82ಕ್ಕೆ ಏರಿದೆ.

ಝಿರ್‌ಗಿರೈ ಪ್ರದೇಶದ ನಾವಾಗಾಲ್ ಟೆಹಾಸಿಲ್‌ನ ಬಾಜುರ್‌ನಲ್ಲಿ ಇತ್ತೀಚೆಗಷ್ಟೇ ಅಪರಿಚಿತ ವ್ಯಕ್ತಿ ಬಾಲಕರ ಪ್ರಾಥಮಿಕ ಶಾಲೆಯನ್ನು ಧ್ವಂಸಗೊಳಸಿರುವುದಾಗಿ ವರದಿ ತಿಳಿಸಿದೆ.

ಶಾಂತಿ ಒಪ್ಪಂದದ ನಂತರ ಇಂತಹ ಘಟನೆ ಇದೇ ಮೊದಲ ಬಾರಿಗೆ ನಡೆದಿದೆ ಎಂದು ವಿವರಿಸಿರುವ ವರದಿ, ಆ ನಿಟ್ಟಿನಲ್ಲಿ ಶಾಲೆಗಳ ಮೇಲಿನ ದಾಳಿಯಿಂದಾಗಿ ಸುಮಾರು 50ಸಾವಿರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುವಂತಾಗಿದೆ.

ಅಲ್ಲದೇ ಕಮ್ಯೂನಲ್ ಹೆಣ್ಣು ಮಕ್ಕಳ ಶಾಲೆಗೆ ವ್ಯಾನ್‌ನಲ್ಲಿ ತೆರಳುತ್ತಿದ್ದ ಷಾಜಿಯಾ ಬೇಗಂ ಹಾಗೂ ಶಾಮಿಮ್ ಬೀಬಿ ಎಂಬಿಬ್ಬರು ಶಿಕ್ಷಕರಿಯನ್ನು ಉಗ್ರರು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದರು ಎಂದು ವರದಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ