ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್: ಸೇನಾಪಡೆಗಳಿಂದ 60 ತಾಲಿಬಾನಿಗಳ ಹತ್ಯೆ (Pakistani forces | kill | Taliban rebels)
Bookmark and Share Feedback Print
 
ಪಾಕಿಸ್ತಾನದ ಆಗ್ರೇಯ ಬಾಗದಲ್ಲಿರುವ ವಜಿರಿಸ್ತಾನದ ಒರಾಕ್‌‌ಝೈ ಬುಡಕಟ್ಟು ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಸೇನಾಪಡೆಗಳು 60 ತಾಲಿಬಾನ್ ಉಗ್ರರನ್ನು ಹತ್ಯೆ ಮಾಡಿವೆ ಎಂದು ಸೇನಾಪಡೆಗಳ ವಕ್ತಾರರು ತಿಳಿಸಿದ್ದಾರೆ.

ದಬೊರಿ ಮತ್ತು ಸಾಮ್ ಪ್ರದೇಶದಲ್ಲಿ ಸೇನಾಪಡೆಗಳ ಮತ್ತು ತಾಲಿಬಾನ್ ಉಗ್ರರ ಮಧ್ಯೆ ಭಾರಿ ಘರ್ಷಣೆ ನಡೆದು ಇಬ್ಬರು ಸೈನಕರು ಹತರಾಗಿ, 20ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಒರಾಕ್‌ಝೈ ಪ್ರದೇಶದಲ್ಲಿ ನೆಡದ ಘರ್ಷಣೆಯಲ್ಲಿ ಸುಮಾರು 40 ಮಂದಿ ಉಗ್ರರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕಳೆದ ಆರು ವಾರಗಳಿಂದ ಸೇನಾಪಡೆಗಳು ನಿರಂತರ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಕನಿಷ್ಠ 700 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಭಧ್ರತಾ ಪಡೆಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ