ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹಮೀದ್ ಮಿರ್‌ಗೆ ತಾಲಿಬಾನ್ ಲಿಂಕ್; ತನಿಖೆ ಆರಂಭ! (Hamid Mir | Jung Group | Taliban | Asian Tigers)
Bookmark and Share Feedback Print
 
ಪಾಕಿಸ್ತಾನದ ಹೆಸರಾಂತ ಸಂಪಾದಕ ಹಮೀದ್ ಮೀರ್‌ಗೆ ತಾಲಿಬಾನ್ ಜತೆ ನಿಕಟ ಸಂಪರ್ಕವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಲ್ಲಿನ ಜಂಗ್ ಮಿಡಿಯಾ ಗ್ರೂಪ್ ತನಿಖೆಯನ್ನು ಕೈಗೊಂಡಿದ್ದು, ಇದಕ್ಕೆ ಸಂಬಂಧಿಸಿತಂದೆ ಸಮಿತಿಯನ್ನು ರಚಿಸಿದೆ. ಅದೇ ವೇಳೆ ಹಮೀದ್‌ರವರ ತಾಲಿಬಾನ್ ಜತೆ ಸಂಬಂಧದ ಧ್ವನಿಮುದ್ರಿತ ಟೇಪನ್ನು ಇಂಟೆಲಿಜೆನ್ಸ್ ಏಜೆನ್ಸಿಗಳು ಖಚಿತಪಡಿಸಿದೆ.

ಕಳೆದ ಕೆಲವು ವಾರಗಳಿಂದ ತಾಲಿಬಾನ್ ಜತೆಗಿನ ಹಮೀದ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಅಲ್ಲಿನ ವೆಬ್‌ಸೈಟ್‌ಗಳು 13 ನಿಮಿಷಗಳ ಸಂಭಾಷಣೆಯನ್ನು ಪ್ರಸಾರ ಮಾಡಿರುವುದು ಭಾರೀ ವಿವಾದಕ್ಕೆಡೆ ಮಾಡಿದೆ.

ಟೇಪ್‌ನಲ್ಲಿ ಹಮೀದ್ ಇತ್ತೀಚೆಗಷ್ಟೇ ಪಂಜಾಬ್ ಕೇಂದ್ರಿತ ತಾಲಿಬಾನ್ ಉಗ್ರ ಸಂಘಟನೆ 'ಏಷಿಯಾ ಟೈಗರ್ಸ್‌'ನಿಂದ ಹತ್ಯೆಗೀಡಾಗಿದ್ದ ಮಾಜಿ ಗುಪ್ತ ಇಲಾಖೆಯ ಅಧಿಕಾರಿ ಖಾಲಿದ್ ಖ್ವಾಜಾ ಚಟುವಟಿಕೆಗಳ ಬಗ್ಗೆ ತಾಲಿಬಾನ್ ಜತೆ ಚರ್ಚೆ ನಡೆಸಿದ್ದಾರೆ.

ಈ ಬಗ್ಗೆ ವಿವಾದವು ಹತ್ತಿಕೊಂಡಿರುವ ಹಿನ್ನಲೆಯಲ್ಲಿ ಸಮಸ್ಯೆಯ ವಿಸ್ತಾರವಾದ ಮಾಹಿತಿಯನ್ನು ಪಡೆಯಲು ಸಮಿತಿ ರಚಿಸಲಾಗಿದೆ ಎಂದು ಜಂಗ್ ಮಿಡಿಯಾ ಗ್ರೂಪ್ ತನ್ನ ದೈನಿಕದಲ್ಲಿ ತಿಳಿಸಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ