ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಫೇಸ್‌ಬುಕ್ ನಂತರ ಯೂ ಟ್ಯೂಬ್‌ಗೂ ಪಾಕ್ ತಡೆ! (Pakistan | YouTube | Facebook ban | Objectionable content)
Bookmark and Share Feedback Print
 
'ಆಕ್ಷೇಪಣಾರ್ಹ ವಿಷಯ' ಹೊಂದಿದೆ ಎಂಬ ಆರೋಪದಡಿಯಲ್ಲಿ ಅಂತರ್ಜಾಲದಲ್ಲಿ ವೀಡಿಯೋ ಹಂಚಿಕೊಳ್ಳುವ ಜಾಲತಾಣವಾಗಿರುವ ಯೂ ಟ್ಯೂಬ್‌ಗೂ ಪಾಕ್ ತಡೆಯೊಡ್ಡಿದೆ.

ಇತ್ತೀಚೆಗಷ್ಟೇ ಪ್ರವಾದಿ ಮೊಹಮ್ಮದ್ ಪೈಗಂಬರ್ ವ್ಯಂಗ ಚಿತ್ರ ವಿವಾದದ ಹಿನ್ನೆಲೆಯಲ್ಲಿ ಸಾಮಾಜಿಕ ನೆಟ್‌ವರ್ಕ್ ತಾಣವಾದ ಫೇಸ್‌ಬುಕ್‌ನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು.

'ಆಕ್ಷೇಪಣಾರ್ಹ ವಿಷಯ'ಕ್ಕೆ ಸಂಬಂಧಿಸಿದಂತೆ ಯೂ ಟ್ಯೂಬ್ ಜಾಲ ತಾಣವನ್ನು ಕೂಡಾ ತಡೆಯಲಾಗುತ್ತಿದೆ ಎಂದು ಪಾಕಿಸ್ತಾನ ದೂರವಾಣಿ ಇಲಾಖೆ (ಪಿಟಿಎ) ಪ್ರಕಟನೆಯಲ್ಲಿ ತಿಳಿಸಿದೆ.

ಆದರೆ ಯಾವ ಕಾರಣಕ್ಕಾಗಿ ಜಾಲವನ್ನು ತಡೆಹಿಡಿಯಲಾಗುತ್ತಿದೆ ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಲಿಲ್ಲ. ಒಟ್ಟಿನಲ್ಲಿ ಬುಧವಾರ ಮಧ್ಯಾಹ್ನದಿಂದಲೇ ಪಾಕಿಸ್ತಾನದ ನೆಟ್ ಬಳಕೆದಾರರು ಯೂ ಟ್ಯೂಬ್ ಜಾಲತಾಣವನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ