ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬ್ಯಾಂಕಾಕ್ ದೇವಸ್ಥಾನದಲ್ಲಿ ಘರ್ಷಣೆಗೆ 9 ಬಲಿ (Bangkok | temple clash | Police | Red Shirts)
Bookmark and Share Feedback Print
 
ಥಾಯ್ಲೆಂಡ್ ಸರಕಾರದ ವಿರುದ್ಧ ಪ್ರತಿಭಟನಾಕಾರರು ಹಾಗೂ ಮಿಲಿಟರಿ ನಡುವೆ ಬುಧವಾರ ನಡೆದ ಘರ್ಷಣೆಯಲ್ಲಿ ಒಂಬತ್ತು ಮಂದಿ ಬಲಿಯಾದ ಘಟನೆ 'ಸುರಕ್ಷಿತ ಪ್ರದೇಶ' ಎಂದು ಪರಿಗಣಿಸಲ್ಪಟ್ಟಿದ್ದ ದೇವಸ್ಥಾನದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೈದ್ಯರು ಹಾಗೂ ಚಿಕಿತ್ಸಾ ತಂಡ ಘಟನಾ ಸ್ಥಳಕ್ಕೆ ಧಾವಿಸಿದ್ದು, ಒಂಬತ್ತು ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸ್ ವಕ್ತಾರ ಪ್ರಾವುತ್ ತಾವೊರ್‌ಸಿರಿ ತಿಳಿಸಿದ್ದಾರೆ.

ಬುಧವಾರದಂದು 'ರೆಡ್ ಶರ್ಟ್' ಪ್ರತಿಭಟನಕಾರರ ಮೇಲೆ ಮಿಲಿಟರಿ ಬಲಪ್ರಯೋಗವನ್ನು ಸರಕಾರ ಮುಂದುವರಿಸಿದೆ. ಆದರೆ ದೇವಾಲಯದಲ್ಲಿ ಒಂದೇ ಒಂದು ಮೃತದೇಹವನ್ನು ಪತ್ತೆ ಹಚ್ಚಿಲ್ಲವೆಂದು ಅಧಿಕಾರಿಗಳು ಹೇಳಿದ್ದು, ಇದರಿಂದಾಗಿ ಸಾವಿನ ಸಂಖ್ಯೆ ಇನ್ನೂ ಏರಿರಬಹುದು ಎಂಬುದು ಖಚಿತವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ