ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪ್ಯಾರಿಸ್ ಮ್ಯೂಸಿಯಂ: ಪಿಕಾಸೋ, ಹೆನ್ರಿ ಕಲಾಕೃತಿ ಕಳವು (Matisse | Picasso | Paris museum | paintings | Georges Braque,)
Bookmark and Share Feedback Print
 
ನವ್ಯ ಚಿತ್ರಕಲೆಯ ಖ್ಯಾತ ಚಿತ್ರಕಾರ ಹೆನ್ರಿ ಮಾಟಿಸ್ಸೆ ಹಾಗೂ ಸ್ಪೇನ್ ದೇಶದ ವಿಶ್ವವಿಖ್ಯಾತ ಚಿತ್ರಕಲಾವಿದ, ಶಿಲ್ಪಿ ಪ್ಯಾಬ್ಲೋ ಪಿಕಾಸೋ ಸೇರಿದಂತೆ ಐದು ಮಂದಿ ಕಲಾವಿದರ ಕೋಟ್ಯಂತರ ರೂಪಾಯಿಯ ಬೆಲೆ ಬಾಳುವ ಕಲಾಕೃತಿಗಳನ್ನು ಪ್ಯಾರಿಸ್ ಮ್ಯೂಸಿಯಂನಿಂದ ಕಳವು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ.

ಐದು ಮಹಾನ್ ಕಲಾವಿದರ ಕಲಾಕೃತಿಗಳ ಒಟ್ಟು ಮೌಲ್ಯ 500ಮಿಲಿಯನ್ ಯುರೋ (635 ಅಮೆರಿಕನ್ ಡಾಲರ್)ಗಳಷ್ಟು ಎಂದು ಅಂದಾಜಿಸಲಾಗಿದೆ. ಪ್ಯಾರಿಸ್‌ನ ಮ್ಯೂಸ್ಸೆ ಡ ಆರ್ಟ್ ಮೋಡರ್ನ್ಸ್‌ನಿಂದ ಈ ಐದು ಕಲಾಕೃತಿಗಳನ್ನು ಕಳವು ಮಾಡಲಾಗಿತ್ತು. ಮ್ಯೂಸಿಯಂ ಅನ್ನು ತೆರದ ಸಂದರ್ಭದಲ್ಲಿ ಕಲಾಕೃತಿಗಳು ನಾಪತ್ತೆಯಾದ ಅಂಶ ಬೆಳಕಿಗೆ ಬಂದಿತ್ತು ಎಂದು ಮೂಲವೊಂದು ತಿಳಿಸಿದೆ.

ಮ್ಯೂಸಿಯಂನ ಕಿಟಕಿಯನ್ನು ಮುರಿದು ಒಳನುಗ್ಗಿದ ಕಳ್ಳರು, ಬುಧವಾರ ರಾತ್ರಿಯಿಡಿ ಕಲಾಕೃತಿಗಳನ್ನು ಇಟ್ಟ ಕಪಾಟಿನ ಪ್ಯಾಡ್ ಲಾಕ್ ಅನ್ನು ಮುರಿದು ಅಪಹರಿಸಿರುವುದಾಗಿ ಮ್ಯೂಸಿಯಂ ಅಧಿಕಾರಿಗಳು ತಿಳಿಸಿದ್ದಾರೆ.

ಮಾಟಿಸ್ಸೆ, ಪಿಕಾಸೋ ಸೇರಿದಂತೆ ಜಾರ್ಜಸ್ ಬ್ರಾಕ್ವೆ, ಫರ್ಡಿನಾಂಡ್ ಲೇಗರ್ ಮತ್ತು ಅಮೆಡೆಯೋ ಮೋಡಿಗ್ಲಿನೈ ಅವರ ಅಭೂತಪೂರ್ವ ಕಲಾಕೃತಿಗಳು ಕಳವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ