ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಾಶ್ಮೀರಕ್ಕಾಗಿ ಹೋರಾಡಲು ಫೈಸಲ್‌ಗೆ ಲಷ್ಕರ್ ತರಬೇತಿ (Faisal Shahzad | Pakistan | Times Square | Kashmir)
Bookmark and Share Feedback Print
 
ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ಬಾಂಬ್ ಸ್ಫೋಟದ ವಿಫಲ ಯತ್ನಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್ ಪೊಲೀಸರು ಬಂಧಿಸಿರುವ ಪಾಕ್ ಮೂಲದ ಫೈಸಲ್ ಶಹಜಾದ್‌ಗೆ ಲಷ್ಕರ್ ಇ ತೊಯ್ಬಾ ಸಂಘಟನೆ ಕಾಶ್ಮೀರಕ್ಕಾಗಿ ಭಾರತದಲ್ಲಿ ಭಯೋತ್ಪಾದನೆ ಕೃತ್ಯ ನಡೆಸಲು ತರಬೇತಿ ನೀಡಿತ್ತು ಎಂದು ಅಮೆರಿಕದ ಎಫ್‌ಬಿಐ ಪತ್ತೆ ಹಚ್ಚಿದೆ.

ಪಾಕಿಸ್ತಾನದ ವಾಯುಸೇನೆಯ ಉಪ ಮಾರ್ಷಲ್ ಒಬ್ಬರ ಮಗನಾದ 30ರ ಹರೆಯದ ಫೈಸಲ್, ತಾನು ಅಫ್ಘಾನಿಸ್ತಾನಕ್ಕೆ ತೆರಳಿ ಅಮೆರಿಕಾದೊಂದಿಗೆ ಹೋರಾಡುವುದಾಗಿ ಹೇಳಿ ಈತ ಅಮೆರಕಾದತ್ತ ಪ್ರಯಾಣ ಬೆಳೆಸಿದ್ದ. ಅಮೆರಿಕಾದ ಕನೆಕ್ಟಿಕಟ್‌ನಲ್ಲಿ ಹಣಕಾಸು ವಿಶ್ಲೇಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಫೈಸಲ್, 2006ರ ಜೂನ್ ತಿಂಗಳಿನಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮುಜಾಫರಬಾದ್ ಪ್ರಾಂತ್ಯದ ಸಮೀಪದ ಹಳ್ಳಿಯೊಂದರಲ್ಲಿ ಲಷ್ಕರ್ ಸಂಘಟನೆಯಿಂದ ತರಬೇತಿ ಪಡೆದಿದ್ದ ಎಂದು ದುಬೈನಲ್ಲಿರುವ ಲಷ್ಕರ್ ಶಾಖೆಯ ಕಮಾಂಡರ್ ತಿಳಿಸಿದ್ದಾರೆ.

ಕೆನಡಾದ ನಿಯತಕಾಲಿಕೆ ಮ್ಯಾಕ್‌ಕ್ಲೀನ್‌ಗೆ ಕಮಾಂಡರ್ ನೀಡಿರುವ ಹೇಳಿಕೆಯಲ್ಲಿ, ಫೈಸಲ್ ತರಬೇತಿ ಕ್ಯಾಂಪಿಗೆ ಬಂದು ಮೂರು ತಿಂಗಳ ಕಾಲ ತರಬೇತಿ ಪಡೆದಿದ್ದ.ನಂತರ ಆತ ಅಮೆರಿಕಾಕ್ಕೆ ವಾಪಸಾಗಿದ್ದ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ