ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಫೇಸ್‌ಬುಕ್, ಯೂ ಟ್ಯೂಬ್ ಆಯ್ತು; ಟ್ವಿಟರ್‌ಗೂ ಪಾಕ್ ತಡೆ! (Pakistan | Facebook | YouTube | Twitter)
Bookmark and Share Feedback Print
 
ಫೇಸ್‌ಬುಕ್, ಯೂ ಟ್ಯೂಬ್ ನಂತರ ಇದೀಗ ಜನಪ್ರಿಯ ನೆಟ್‌ವರ್ಕಿಂಗ್ ಸಾಮಾಜಿಕ ಜಾಲತಾಣ ಟ್ವಿಟರ್‌ ಸಂಪರ್ಕಕ್ಕೂ ಪಾಕಿಸ್ತಾನ ತಡೆ ಹಿಡಿದಿದೆ.

ಅಂತಾರ್ಜಾಲ ಸೇವಾ ಸರಬರಾಜು ಇಲಾಖೆ ಜಾಲತಾಣವನ್ನು ತಡೆ ಹಿಡಿಯುವುದರೊಂದಿಗೆ ಗ್ರಾಹಕರಿಗೆ ಟ್ವಿಟರ್ ಜಾಲತಾಣ ಸಂಪರ್ಕದ ಅವಕಾಶದಿಂದ ವಂಚಿತರಾಗಿದ್ದಾರೆ. ಬಳಕೆದಾರರು ಟ್ವಿಟರ್‌ನ್ನು ಕ್ಲಿಕ್ಕಿಸಿದಾಗ ಈ ತಾಣವನ್ನು ನಿರ್ಬಂಧಿಸಲಾಗಿದೆ ಎಂಬ ಸಂದೇಶ ಕಾಣಿಸುತ್ತಿದೆ.

'ಆಕ್ಷೇಪಣಾರ್ಹ ವಿಷಯ'ಕ್ಕೆ ಸಂಬಂಧಿಸಿದಂತೆ ಕಳೆದೆರಡು ದಿನಗಳಲ್ಲಿ ಪಾಕಿಸ್ತಾನ ಎರಡು ಪ್ರಮುಖ ಜಾಲತಾಣಗಳನ್ನು ತಡೆ ಹಿಡಿದಿತ್ತು.

ಮೊದಲು ಪ್ರವಾದಿ ಮೊಹಮ್ಮದ್ ಪೈಗಂಬರ್ ವ್ಯಂಗ ಚಿತ್ರ ಸ್ಪರ್ಧೆ ವಿವಾದದ ಹಿನ್ನೆಲೆಯಲ್ಲಿ ಸಾಮಾಜಿಕ ನೆಟ್‌ವರ್ಕ್ ತಾಣ ಫೇಸ್‌ಬುಕ್‌ನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಲಾಹೋರ್ ಹೈಕೋರ್ಟ್ ಆದೇಶ ಹೊರಡಿಸಿತ್ತು. ನಂತರ 'ಆಕ್ಷೇಪಣಾರ್ಹ ವಿಷಯ' ಹೊಂದಿದೆ ಎಂಬ ಆರೋಪದಡಿಯಲ್ಲಿ ಅಂತರ್ಜಾಲದಲ್ಲಿ ವೀಡಿಯೋ ಹಂಚಿಕೊಳ್ಳುವ ಯೂ ಟ್ಯೂಬ್‌ ಜಾಲತಾಣಕ್ಕೂ ಪಾಕ್ ತಡೆಯೊಡ್ಡಿದೆ. ಇದೀಗ ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಟ್ವಿಟರ್.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ