ಏಷಿಯಾದ ಅತ್ಯುನ್ನತ ಧಾರ್ಮಿಕ, ವೈದ್ಯಕೀಯ ಹಾಗೂ ಗ್ರಾಮೀಣ ಪ್ರವಾಸೋದ್ಯಮ ಹೊಂದಿರುದ ಭಾರತ ದೇಶಕ್ಕೆ ಭೇಟಿ ನೀಡಲು ವಿದೇಶಿ ಪ್ರವಾಸಿಗರಿಗೆ ಕರೆ ನೀಡಿರುವ ಪ್ರವಾಸೋದ್ಯಮ ಕಾರ್ಯದರ್ಶಿ ಸುಜಿತ್ ಬ್ಯಾನರ್ಜಿ, ಭಾರತ ಸುರಕ್ಷಿತ ತಾಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೆನಡಾ ಪ್ರವಾಸಿಗರಲ್ಲಿ ಭಾರತ ದೇಶದ ಧಾರ್ಮಿಕ, ಸಾಂಸ್ಕೃತಿಕ ಪರಂಪರೆ ಮತ್ತು ವೈದ್ಯಕೀಯ ಪ್ರವಾಸೋದ್ಯಮಗಳ ಬಗ್ಗೆ ಅಧ್ಯಯನ ಮಾಡುವಂತೆ ಮನವಿ ಮಾಡುತ್ತಿರುವುದಾಗಿ ಫೆಸಿಫಿಕ್ ಏಷಿಯಾ ಟ್ರಾವೆಲ್ ಅಸೋಸಿಯೇಷನ್ (ಪಿಎಟಿಎ) ನೇತೃತ್ವದಲ್ಲಿ ಉತ್ತಮ ಅಮೆರಿಕಾದ ಪ್ರವಾಸಿಗರನ್ನು ಆಕರ್ಷಿಸಲು ಸಂಘಟಿಸಿದ ರೋಡ್ ಶೋ ಕಾರ್ಯಕ್ರಮವೊಂದರಲ್ಲಿ ಬ್ಯಾನರ್ಜಿ ಈ ರೀತಿಯಾಗಿ ನುಡಿದರು.
ರೋಡ್ ಶೋದಲ್ಲಿ ಭಾರತದ 12 ಪ್ರವಾಸಿ ಆಪರೇಟರ್‌ಗಳು ಪಾಲ್ಗೊಂಡಿದ್ದರು. ಅಲ್ಲದೆ ಉತ್ತರ ಅಮೆರಿಕಾದ ಪ್ರವಾಸಿಗರನ್ನು ಆಕರ್ಷಿಸಲು ಗುರಿಯಿರಿಸಿಕೊಂಡಿದ್ದರು. ಭಾರತಕ್ಕೆ ಈಗಾಗಲೇ ಪ್ರತಿವರ್ಷ 5.1 ಮಿಲಿಯನ್ ಉತ್ತರ ಅಮೆರಿಕಾ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ ಎಂದರು.