ತಾನು ಈಗಲೂ ಕಮ್ಯೂನಿಷ್ಟ್ ಎಂದು ಹೇಳಿಕೊಂಡಿರುವ ಟೆಬೆಟ್ ಧಾರ್ಮಿಕ ಮುಖಂಡ ದಲೈಲಾಮಾ, ಆ ನಿಟ್ಟಿನಲ್ಲಿ ಕೆಲವು ಕಮ್ಯೂನಿಷ್ಟ್ ದೇಶಗಳು ಬಂಡವಾಳಶಾಹಿ ನೀತಿಯನ್ನು ಅನುಸರಿಸುವ ಮೂಲಕ ಹೊಸ ಸ್ವಾತಂತ್ರ್ಯವನ್ನು ಪಡೆದುಕೊಳ್ಳಲು ಮುಂದಾಗಿವೆ ಎಂದು ತಿಳಿಸಿದ್ದಾರೆ.
ತಾನು ಈಗಲೂ ಮಾರ್ಕಿಸ್ಟ್ ಎಂದು ಗಡಿಪಾರುಗೊಂಡ ಟಿಬೆಟ್ ಬೌದ್ಧ ಗುರು ಲಾಮಾ ನ್ಯೂಯಾರ್ಕ್‌ನಲ್ಲಿ ಮಾತನಾಡುತ್ತ ತಿಳಿಸಿದ್ದಾರೆ. ಇಲ್ಲಿಗೆ ಆಗಮಿಸಿದ್ದ ಅವರು ಬಿಗಿ ಭದ್ರತೆಯ ನಡುವೆ ಸಾರ್ವಜನಿಕ ಉಪನ್ಯಾಸವನ್ನು ನೀಡಿದರು.
ಮಾರ್ಕಿಸಂ ಎಂಬುದು ನೀತಿಶಾಸ್ತ್ರ ಎಂದು ಬಣ್ಣಿಸಿದ ದಲೈಲಾಮಾ, ಬಂಡವಾಳಶಾಹಿ ನೀತಿ ಕೇವಲ ಲಾಭ ಗಳಿಸುವುದು ಹೇಗೆಂಬುದನ್ನು ಕಲಿಸಿಕೊಡುತ್ತದೆ ಎಂದು ಹೇಳಿದರು. ಹಾಗಾಗಿ ಚೀನಾ ಬಂಡವಾಳಶಾಹಿ ನೀತಿಯನ್ನು ಅಪ್ಪಿಕೊಂಡು ಕಮ್ಯೂನಿಸಂ ಸಿದ್ದಾಂತವನ್ನು ಬಿಟ್ಟು ಅಭಿವೃದ್ದಿಯತ್ತ ಹೆಜ್ಜೆ ಹಾಕಿದೆ ಎಂದರು.
ಬಂಡವಾಳಶಾಹಿ ನೀತಿ ಚೀನಾ ದೇಶಕ್ಕೆ ಹಲವಾರು ಧನಾತ್ಮಕ ಅಂಶವನ್ನು ದೊರಕಿಸಿಕೊಟ್ಟಿದೆ. ಹಾಗಾಗಿ ಚೀನಾದ ಕೋಟ್ಯಂತರ ಜನರು ಉನ್ನತ ದರ್ಜೆಯಲ್ಲಿ ಬದುಕಲು ಸಾಧ್ಯವಾಗಿದೆ ಎಂದು ತಿಳಿಸಿದರು.