ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಲಿಂಗಿ ಜೋಡಿಗಳನ್ನು ಶಿಕ್ಷಿಸಬೇಡಿ: ಮಾಲ್ವಿಗೆ ಅಮೆರಿಕ (United States | Washington | Malawi | execution)
Bookmark and Share Feedback Print
 
ಮಾಲ್ವಿಯಲ್ಲಿ ಸಲಿಂಗ ಜೋಡಿಗಳನ್ನು ಅಪರಾಧಿಗಳೆಂದು ತೀರ್ಪು ನೀಡಿ, ಕಠಿಣ ಶಿಕ್ಷೆಯನ್ನು ವಿಧಿಸಿದ್ದನ್ನು ತೀವ್ರವಾಗಿ ಖಂಡಿಸಿರುವ ಅಮೆರಿಕ, ಆ ನಿಟ್ಟಿನಲ್ಲಿ ಆಫ್ರಿಕ ಹಾಗೂ ಇನ್ನುಳಿದ ದೇಶಗಳು ಲಿಂಗಭೇದ ಮತ್ತು ಲೈಂಗಿಕ ಸಂಬಂಧಿ ಆರೋಪದ ಮೇಲೆ ಬಂಧಿಸುವುದು, ಗಲ್ಲುಶಿಕ್ಷೆಗೆ ಗುರಿಪಡಿಸುವುದನ್ನು ನಿಲ್ಲಿಸುವಂತೆ ತಾಕೀತು ಮಾಡಿದೆ.

ಮಾಲ್ವಿಯ ಸಲಿಂಗ ಜೋಡಿಗಳಾದ ಸ್ಟೀವನ್ ಮೋನ್‌ಜೆಜಾ ಮತ್ತು ತಿವಾಂಗೆ ಚಿಂಬಾಲಾಗಾ ಅಲ್ಲಿನ ನ್ಯಾಯಾಲಯ ಆರೋಪಿತರು ಎಂದು ತೀರ್ಪು ನೀಡಿ, ಕಠಿಣ ಶಿಕ್ಷೆ ವಿಧಿಸಿರುವುದು ಸರಿಯಲ್ಲ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ರೋಬೆರ್ಟ್ ಗಿಬ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಾಲ್ವಿ ಕೋರ್ಟ್ ಬುಧವಾರ ಸ್ಟೀವನ್ (26) ಹಾಗೂ ತಿವಾಂಗೆ ಸಲಿಂಗ ಜೋಡಿಗಳಿಗೆ ಕ್ರಮವಾಗಿ 20 ಮತ್ತು 14ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿತ್ತು. ಅಲ್ಲದೇ ಕಠಿಣ ಕೆಲಸ ಮಾಡುವಂತೆಯೂ ಸೂಚಿಸಿತ್ತು. ಈ ಇಬ್ಬರು ಜೋಡಿಗಳು ಡಿಸೆಂಬರ್ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಸಂದರ್ಭದಲ್ಲಿ ಬಂಧಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ