ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇರಾಕ್: ಕಾರ್ ಬಾಂಬ್ ಸ್ಫೋಟಕ್ಕೆ 23 ಬಲಿ (Iraq | car bomb | Blast | International)
Bookmark and Share Feedback Print
 
ಇರಾಕ್‌ನ ಕೇಂದ್ರ ನಗರ ಪ್ರದೇಶದ ಮಾರುಕಟ್ಟೆಯಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ಕನಿಷ್ಠ 23 ಮಂದಿ ಬಲಿಯಾಗಿದ್ದು, 55 ಮಂದಿ ಗಾಯಗೊಂಡಿದ್ದಾರೆಂದು ದಿಯಾಯಾ ಪ್ರಾಂತ್ಯದ ಭದ್ರತಾ ಕಮಾಂಡರ್ ತಿಳಿಸಿದ್ದಾರೆ.

ರಾಜಧಾನಿ ಬಾಗ್ದಾದ್‌ನ ಉತ್ತರದಲ್ಲಿರುವ 65 ಕೀ.ಮೀ ದೂರದ ಪ್ರದೇಶದಲ್ಲಿ ಸ್ಥಳೀಯ ಕಾಲಮಾನ ರಾತ್ರಿ 7.30ರ ಹೊತ್ತಿಗೆ ಸ್ಫೋಟ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಇರಾಕ್‌ನಲ್ಲಿ ಮೇ 14ರಂದು ನಡೆದ ದಾಳಿಯ ನಂತರದ ನಡೆದ ಬೃಹತ್ ದಾಳಿಯಾಗಿದೆ. ಅಂದು ಪುಟ್ಬಾಲ್ ಪಂದ್ಯವೊಂದು ನಡೆಯುತ್ತಿದ್ದ ಸಂದರ್ಭದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 25 ಮಂದಿ ಮೃತಪಟ್ಟಿದ್ದು, 120 ಮಂದಿ ಗಾಯಗೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ