ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜೂನ್‌ನಲ್ಲಿ ಭಾರತ-ಅಮೆರಿಕಾ ದ್ವಿಪಕ್ಷೀಯ ಮಾತುಕತೆ (United States | India | Washington | Krishna)
Bookmark and Share Feedback Print
 
ಜೂನ್ ತಿಂಗಳಲ್ಲಿ ಭಾರತ ಮತ್ತು ಅಮೆರಿಕಾ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಉಭಯ ದೇಶಗಳ ನಾಯಕರುಗಳು ಜಾಗತಿಕ ಹಾಗೂ ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ಚರ್ಚೆ ಕೈಗೊಳ್ಳಲಿದ್ದಾರೆ.

ಭಾರತದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಜತೆಗಿನ ಮಾತುಕತೆಗೆ ಆತಿಥ್ಯ ವಹಿಸಲು ಅಮೆರಿಕಾ ಎದುರು ನೋಡುತ್ತಿದೆ ಎಂದು ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ಪಿ.ಜೆ. ಕ್ರೌಲೆ ತಿಳಿಸಿದ್ದಾರೆ.

ಕೃಷಿ, ವಿದ್ಯಾಭ್ಯಾಸ, ಶಕ್ತಿ, ವಾಣಿಜ್ಯ, ಭಯೋತ್ಪಾದನೆಗಳಂತಹ ಪ್ರಮುಖ ಸಮಸ್ಯೆ ವಿಷಯಗಳ ಬಗ್ಗೆ ಉಭಯ ವಿಭಾಗ ಉನ್ನತ ವಲಯದ ಮಾತುಕತೆ ಕೈಗೊಳ್ಳಲಿದ್ದು, ಕೃಷ್ಣ ಮತ್ತು ಹಿಲರಿ ಕ್ಲಿಂಟನ್ ಮಾತುಕತೆಯ ನೇತೃತ್ವ ನೀಡಲಿದ್ದಾರೆ.

ಜೂನ್ 1ರಿಂದ 4ರವರೆಗೆ ನಡೆಯಲಿರುವ ಈ ಮಾತುಕತೆಯಲ್ಲಿ ಜಾಗತಿಕ ಹಾಗೂ ಪ್ರಾದೇಶಿಕ ಸಮಸ್ಯೆಗಳು ಕೂಡಾ ಪ್ರಧಾನ ಚರ್ಚಾ ವಿಷಯವಾಗಲಿದೆ. ಅಲ್ಲದೆ ಉಭಯ ದೇಶಗಳ ನಡುವೆ ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆ ಕೂಡಾ ನಡೆಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ