ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನದಲ್ಲಿ ಇದೀಗ ಬ್ಲ್ಯಾಕ್‌ಬೆರ್ರಿ ಸೇವೆಗೂ ತಡೆ! (Blackberry | Pakistan | Twitter | Facebook | PTA | YouTube)
Bookmark and Share Feedback Print
 
ಪಾಕಿಸ್ತಾನದ ದೂರಸಂಪರ್ಕ ಇಲಾಖೆ (ಪಿಟಿಎ) ಜನಪ್ರಿಯ ನೆಟ್‌ವರ್ಕಿಂಗ್ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್, ಟ್ವಿಟರ್, ಯೂ ಟ್ಯೂಬ್‌ ಸಂಪರ್ಕಕ್ಕೆ ಮಾತ್ರ ತಡೆಯೊಡ್ಡಿಲ್ಲ ಇದೀಗ ಬ್ಲ್ಯಾಕ್‌ಬೆರ್ರಿ ಸೇವೆಗೂ ತಡೆಯೊಡ್ಡಿದೆ.

ಮುಂದಿನ ಸೂಚನೆ ನೀಡುವವರೆಗೆ ಎಲ್ಲಾ ಸೆಲ್ಯೂಲರ್ ಕಂಪನಿಗಳು ಕೂಡಲೇ ಎಲ್ಲಾ ಬ್ಲ್ಯಾಕ್ ಬೆರ್ರಿ ಸೇವೆಗಳನ್ನು ನಿಲ್ಲಿಸುವಂತೆ ಪಾಕಿಸ್ತಾನ್ ಟೆಲಿಕಮ್ಯೂನಿಕೇಷನ್ ಅಥೋರಿಟಿ ಆದೇಶ ನೀಡಿರುವುದಾಗಿ ದಿ ಡೈಲಿ ಟೈಮ್ಸ್ ವರದಿ ತಿಳಿಸಿದೆ.

ಲಾಹೋರ್ ಹೈಕೋರ್ಟ್ ನೀಡಿರುವ ಆದೇಶದ ಅನ್ವಯ ಈ ನಿರ್ದೇಶನವನ್ನು ಪಿಟಿಎ ಜಾರಿಗೊಳಿಸಿದೆ ಎಂದು ಮೂಲಗಳು ತಿಳಿಸಿದೆ. ಈಗಾಗಲೇ ದೇಶಾದ್ಯಂತ ಇಂಟರ್ನೆಟ್‌ನಲ್ಲಿ ಫೇಸ್‌ಬುಕ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.

ಫೇಸ್‌ಬುಕ್ ಜಾಲತಾಣ ಸಂಪರ್ಕಕ್ಕೆ ತಡೆಯೊಡ್ಡಿದ ಬೆನ್ನಲ್ಲೇ ಪ್ರಮುಖ ವಿಡಿಯೋ ಪೋರ್ಟಲ್ ಯೂ ಟ್ಯೂಬ್ ಬಳಕೆಗೂ ತಡೆಯೊಡ್ಡಿತ್ತು. ಅಲ್ಲದೇ ಧಾರ್ಮಿಕ ನಿಂದನೆ ಆರೋಪದಡಿಯಲ್ಲಿ ಟ್ವಿಟರ್‌ ಬಳಕೆಗೂ ತಡೆಯೊಡ್ಡಿತ್ತು. ಆದರೂ ನೂರಾರು ಟ್ವಿಟರ್ ಬಳಕೆದಾರರು ತಮ್ಮ ಹೆಸರಿನಲ್ಲಿ ಟ್ವಿಟರ್ ಲಾಗ್ ಮಾಡಲು ಪ್ರಯತ್ನಿಸಿದಾಗ, ಈ ತಾಣವನ್ನು ನಿರ್ಬಂಧಿಸಲಾಗಿದೆ ಎಂಬ ಸಂದೇಶ ಕಂಪ್ಯೂಟರ್‌ನಲ್ಲಿ ಕಾಣಿಸಿಕೊಂಡಿತ್ತು.

ಧಾರ್ಮಿಕ ನಿಂದನೆಯ ಹಿನ್ನೆಲೆಯಲ್ಲಿ 450 ಲಿಂಕ್ಸ್‌ಗಳನ್ನು ಈಗಾಗಲೇ ತಡೆಹಿಡಿಯಲಾಗಿದೆ ಎಂದು ಪಿಟಿಎ ತಿಳಿಸಿದೆ. ಏತನ್ಮಧ್ಯೆ ಪೇಸ್‌ಬುಕ್ ಆಯೋಜಿಸಿದ್ದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ರೇಖಾಚಿತ್ರ ಸ್ಪರ್ಧೆಗೆ ತಡೆಯೊಡ್ಡಿದ್ದನ್ನು ವಿರೋಧಿಸಿ ಪೇಶಾವರದಲ್ಲಿ ಸುಮಾರು 500ಕ್ಕೂ ಅಧಿಕ ಸ್ಪರ್ಧಾಳುಗಳು ಪ್ರತಿಭಟನೆ ನಡೆಸಿದ್ದಾರೆ. ಅವರೆಲ್ಲ ಸರ್ಕಾರದ ವಿರುದ್ಧ ಘೋಷಣೆ ಕೂಗಿ ವಿರೋಧ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ