ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಫ್ಘಾನ್ ಸರ್ಕಾರದ ಜತೆ ಮಾತುಕತೆ ಪ್ರಶ್ನೆ ಇಲ್ಲ: ತಾಲಿಬಾನ್ (Afghan government | Taliban | Kabul | Maldives | militant outfit)
Bookmark and Share Feedback Print
 
ಮಾಲ್ಡೀವ್ಸ್‌ನಲ್ಲಿ ಅಫ್ಘಾನಿಸ್ತಾನ ಸರ್ಕಾರದ ಜೊತೆ ಉಗ್ರಗಾಮಿ ಸಂಘಟನೆಯ ಮುಖಂಡರು ಮಾತುಕತೆ ನಡೆಸಲಿದ್ದಾರೆ ಎಂಬ ಮಾಧ್ಯಮದ ವರದಿಯನ್ನು ತಾಲಿಬಾನ್ ಸಾರಸಗಟಾಗಿ ತಳ್ಳಿಹಾಕಿದೆ.

ಮಾಧ್ಯಮದ ವರದಿ ಹಿನ್ನೆಲೆಯಲ್ಲಿ ತಾಲಿಬಾನ್ ಇ-ಮೇಲ್ ಹೇಳಿಕೆಯನ್ನು ರವಾನಿಸಿದ್ದು, ಸಂಘಟನೆಯ ಮಾಜಿ ಸದಸ್ಯರಾಗಿದ್ದು, ಶರಣಾಗಿದ್ದವರು ಅಫ್ಘಾನ್ ಸರ್ಕಾರದ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ಕ್ಸಿನ್‌ಹುವಾ ವರದಿ ತಿಳಿಸಿದೆ.

ಅಫ್ಘಾನ್ ಸರ್ಕಾರದ ಜೊತೆ ಮಾತುಕತೆ ನಡೆಸಲು ಪಾಲ್ಗೊಳ್ಳುವ ಸದಸ್ಯರು ಸರ್ಕಾರದ ಗುಪ್ತಚರ ಇಲಾಖೆಯ ಕೈಗೊಂಬೆಗಳು ಎಂದು ತಾಲಿಬಾನ್ ತನ್ನ ಹೇಳಿಕೆಯಲ್ಲಿ ಕಿಡಿಕಾರಿದೆ.

ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಮಿಲಿಟರಿ ಪಡೆಯನ್ನು ಯಾವುದೇ ಶರತ್ತಿಲ್ಲದೆ ವಾಪಸ್ ಕಳುಹಿಸಬೇಕು ಇಲ್ಲದಿದ್ದಲ್ಲಿ ಸರ್ಕಾರದ ಜೊತೆ ಯಾವುದೇ ಶಾಂತಿ ಮಾತುಕತೆಯ ಪ್ರಸ್ತಾಪವೇ ಇಲ್ಲ ಎಂದು ತಾಲಿಬಾನ್ ಸ್ಪಷ್ಟಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ