ಭೂಕುಸಿತದಿಂದಾಗಿ ರೈಲೊಂದು ಹಳಿ ತಪ್ಪಿ ಕನಿಷ್ಠ 10 ಮಂದಿ ಸಾವನ್ನಪ್ಪಿರುವ ದಾರುಣ ಗಠನೆ ಚೀನಾದ ಪೂರ್ವ ಭಾಗದ ಪ್ರಾಂತ್ಯದಲ್ಲಿ ನಡೆದಿದೆ.
ಚೀನಾದ ಜಿಯಾಂಗ್‌ಕ್ಸಿ ಪ್ರಾಂತ್ಯದ ಫುಝು ನಗರಕ್ಕೆ ಹತ್ತಿರದಲ್ಲಿರುವ ಪರ್ವತ ಪ್ರದೇಶವಾದ ಗುವೈಲಿನ್ ಪ್ರವಾಸಿ ತಾಣಕ್ಕೆ ತೆರಳುತ್ತಿದ್ದ ರೈಲು, ಭೂಕುಸಿತದಿಂದಾಗಿ ಹಳಿ ತಪ್ಪಿ ಅಪಘಾತಕ್ಕೀಡಾಯಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತ ಸಂಭವಿಸಿದ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಸುರಕ್ಷಾ ಪಡೆಗಳನ್ನು ರವಾನಿಸಲಾಗಿದ್ದು, 10 ಪ್ರಯಾಣಿಕರ ಶವಗಳನ್ನು ಹೊರತೆಗೆಯಲಾಗಿದ್ದು, 53ಕ್ಕೂ ಹೆಚ್ಚು ಮಂದಿ ರೈಲು ಬೋಗಿಯೊಳಗೆ ಸಿಲುಕಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಘಟನಾ ಸ್ಥಳಕ್ಕೆ 150 ಅಗ್ನಿಶಾಮಕ ಪಡೆಗಳನ್ನು ರವಾನಿಸಲಾಗಿದ್ದು, ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.