ಟೈಮ್ಸ್ ಸ್ಕೈರ್ ಸಂಚಿನಲ್ಲಿ ಭಾಗಿಯಾಗಿರುವುದಕ್ಕೆ ಹೆಮ್ಮೆಯಿದೆ
ಇಸ್ಲಾಮಾಬಾದ್, ಭಾನುವಾರ, 23 ಮೇ 2010( 13:20 IST )
ನ್ಯೂಯಾರ್ಕ್‌ನ ಟೈಮ್ಸ್ ಸ್ಕೈರ್ ಪ್ರದೇಶದಲ್ಲಿ ಬಾಂಬ್ ಸ್ಫೋಟಿಸುವ ಸಂಚಿನಲ್ಲಿ ಪಾಲ್ಗೊಂಡಿರುವುದಕ್ಕೆ ಹೆಮ್ಮೆಪಡುತ್ತೇನೆ ಎಂದು ಬಂಧಿತ ಪಾಕಿಸ್ತಾನಿ ಮೂಲದ ಉಗ್ರಗಾಮಿಗಳು ಹೇಳಿರುವುದಾಗಿ ಅಮೆರಿಕದ ಗುಪ್ತಚರ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಟೈಮ್ಸ್ ಸಂಚಿನಲ್ಲಿ ಭಾಗಿಯಾದ ಫೈಸಲ್ ಶಹಜಾದ್ ಅವರೊಂದಿಗೆ ಸಂಪರ್ಕವಿರುವ ಆರು ಮಂದಿ ಪಾಕಿಸ್ತಾನ ಮೂಲದ ನಾಗರಿಕರನ್ನು ಬಂಧಿಸಲಾಗಿದೆ. ಕೆಲವರು ಅಮೆರಿಕದಲ್ಲಿಯೇ ಶಿಕ್ಷಣ ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಂಧಿತ ಉಗ್ರರ ವಿವರಗಳನ್ನು ಪೊಲೀಸ್ ಅಧಿಕಾರಿಗಳು ಬಹಿರಂಗಪಡಿಸಿದ್ದು, ಆದರೆ ಅವರನ್ನು ಯಾವಾಗ ಮತ್ತು ಎಲ್ಲಿ ಬಂಧಿಸಲಾಯಿತು ಎನ್ನುವ ವಿವರಣೆಗಳನ್ನು ನೀಡಲು ನಿರಾಕರಿಸಿದ ಅಧಿಕಾರಿಗಳು, ಬಂಧಿತರಿಗೆ ಉಗ್ರಗಾಮಿ ಸಂಘಟನೆಗಳೊಂದಿಗೆ ಸಂಪರ್ಕವಿದೆ ಎನ್ನುವುದು ಸಾಬೀತಾಗಿದೆ ಎಂದು ಹೇಳಿದ್ದಾರೆ.
ಅಮೆರಿಕದ ಗುಪ್ತಚರ ದಳದ ಅಧಿಕಾರಿಗಳು ಬಂಧಿತರನ್ನು ತನಿಖೆಗೆ ಒಳಪಡಿಸಿದ್ದು, ತಾವು ಯಾವುದೇ ತಪ್ಪು ಮಾಡಿಲ್ಲ ಶಹಜಾದ್ ನಮ್ಮ ಆತ್ಮಿಯ ಗೆಳೆಯ ಎಂದು ಹೆಮ್ಮೆಯಿಂದ ಹೇಳುವುದಾಗಿ ಉಗ್ರರು ತಿಳಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.