ಚೀನಾ; ರೈಲು, ರಸ್ತೆ ಅಪಘಾತ, ಕಾಡ್ಗಿಚ್ಚಿನಿಂದಾಗಿ 68 ಸಾವು
ಬೀಜಿಂಗ್, ಸೋಮವಾರ, 24 ಮೇ 2010( 11:33 IST )
ಚೀನಾಕ್ಕೆ ಸಂಬಂಧಿಸಿದಂತೆ ಭಾನುವಾರ ಅತ್ಯಂತ ಕರಾಳ ದಿನ. ಇಲ್ಲಿನ ಲಿಯೊನಿಂಗ್ ಮತ್ತು ಜಿಯಾಂಗ್ಸಿ ಪ್ರಾಂತ್ಯಗಳಲ್ಲಿ ಭಾನುವಾರ ಸಂಭವಿಸಿದ ಪ್ರತ್ಯೇಕ ರೈಲು, ರಸ್ತೆ ಅಪಘಾತ ಮತ್ತು ಕಾಡ್ಗಿಚ್ಚಿನಿಂದಾಗಿ ಒಟ್ಟು 68 ಮಂದಿ ಮೃತಪಟ್ಟಿದ್ದು, 100 ಮಂದಿ ಗಾಯಗೊಂಡಿದ್ದಾರೆ.
ಭೂಕುಸಿತದಿಂದಾಗಿ ಪ್ಯಾಸೆಂಜರ್ ರೈಲೊಂದು ಹಳಿ ತಪ್ಪಿದ ಪರಿಣಾಮ 19 ಮಂದಿ ಸತ್ತು, 71 ಮಂದಿ ಗಾಯಗೊಂಡ ದಾರುಣ ಘಟನೆ ಪೂರ್ವ ಭಾಗದ ಜಿಯಾಂಗ್ಸಿ ಪ್ರಾಂತ್ಯದಲ್ಲಿ ನಡೆದಿದೆ.
ಮತ್ತೊಂದು ಅಪಘಾತದಲ್ಲಿ ನಿಯಂತ್ರಣ ತಪ್ಪಿದ ಟ್ರಕ್‌ವೊಂದು ಬಸ್‌ಗೆ ಢಿಕ್ಕಿಯಾದ ಪರಿಣಾಮ 32 ಮಂದಿ ಅಸುನೀಗಿದ್ದರು. ದುರಂತದಲ್ಲಿ 21 ಮಂದಿ ಗಾಯಗೊಂಡಿದ್ದಾರೆ.
ಚೀನಾದ ಚಾಂಕಿಂಗ್‌ನಲ್ಲಿ 47 ಪ್ರಯಾಣಿಕರಿದ್ದ ಬಸ್ಸೊಂದು ರಸ್ತೆ ಬದಿಯ ಗೋಡೆಗೆ ಬಡಿದು ಸಂಭವಿಸಿದ ಅಪಘಾತದಲ್ಲಿ ಐದು ಮಂದಿ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
ಇದಕ್ಕೆ ಮತ್ತೊಂದು ಸೇರ್ಪಡೆಯಂತೆ ಯೆನ್ನಾನ್ ಗ್ರಾಮದಲ್ಲಿ ಸಂಭವಿಸಿದ ಕಾಳ್ಗಿಚ್ಚಿನಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ಒಟ್ಟಿನಲ್ಲಿ ಚೀನಾದ ಪಾಲಿಗೆ ಭಾನುವಾರ ಕರಾಳ ದಿನವಾಗಿ ಮಾರ್ಪಟ್ಟಿದೆ.