ಪಶ್ಚಿಮ ನಾರ್ವೆಯಲ್ಲಿ ಜರ್ಮನ್ ವಿಹಾರ ಹಡಗುವೊಂದಕ್ಕೆ ಭಾನುವಾರ ಬೆಂಕಿ ಹತ್ತಿಕೊಂಡಿದ್ದರೂ ಕೂಡಾ ತ್ವರಿತ ಗತಿಯ ರಕ್ಷಣಾ ಕಾರ್ಯಾಚರಣೆಯಿಂದಾಗಿ 600 ಮಂದಿ ಪ್ರಯಾಣಿಕರನ್ನು ರಕ್ಷಿಸಲಾಗಿದೆ.
ಜರ್ಮನಿಯ ಈ ಹಡಗು ಹ್ಯಾಂಬರ್ಗ್‌ನಿಂದ ಎಡಿಪ್‌ಜಾರ್ಡ್‌ಗೆ ಪ್ರಯಾಣಿಸುತ್ತಿದ್ದಾಗ ಸಂದರ್ಭದಲ್ಲಿ ಅಗ್ನಿ ಸ್ಪರ್ಶವಾಯಿತು. ಒಸ್ಲೊದಿಂದ 200 ಕಿ.ಮೀ.ದೂರದಲ್ಲಿ ಘಟನೆ ಸಂಭವಿಸಿದೆ ಎಂದು ಜಿನ್ವಾ ಪತ್ರಿಕೆ ವರದಿ ಮಾಡಿವೆ.
ಹಡಗಿನ ಇಂಜಿನ್ ಕೋಣೆಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಕ್ಷಣ ಮಾತ್ರದಲ್ಲಿ ಇತರೆಡೆಗೆ ಹಬ್ಬತೊಡಗಿತು. ಆದರೆ ಆತಂಕದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.