ದಕ್ಷಿಣ ಪೆರುನಲ್ಲಿ 5.9 ತೀವ್ರತೆಯ ಭೂಕಂಪ ಉಂಟಾಗಿರುವುದಾಗಿ ಭೂಕಂಪ ಶಾಸ್ತ್ರಜ್ಞರು ತಿಳಿಸಿದ್ದಾರೆ. ಆದರೆ ಘಟನೆಯಲ್ಲಿ ಯಾವುದೇ ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ.
ಸ್ಥಳೀಯ ಕಾಲಮಾನ ಸಂಜೆ 5.46ಕ್ಕೆ ಕಂಪನವುಂಟಾಗಿದೆ ಎಂದು ಅಮೆರಿಕಾ ಭೂವಿಜ್ಞಾನ ಸರ್ವೆ (ಯುಎಸ್‌ಜಿಎಸ್) ವಿಭಾಗ ತಿಳಿಸಿದೆ.
ರಾಜಧಾನಿ ಲಿಮಾದಿಂದ 360 ಕೀ.ಮೀ. ದೂರದಲ್ಲಿರುವ ಅಯಾಕುಕೊ ಭೂಕಂಪನದ ಕೇಂದ್ರ ಬಿಂದುವಾಗಿದ್ದು, 110 ಕೀ. ಮೀ. ಆಳದ ವರೆಗೆ ಕಂಪನದ ತೀವ್ರತೆ ದಾಖಲಾಗಿದೆ ಎಂದು ಯುಎಸ್‌ಜಿಎಸ್ ಅಂದಾಜು ಮಾಡಿದೆ.
ಅಯಾಕುಕೊ ಸಹಿತ ಅಪುರಿಮಾಕ್, ಐಕಾ ಮತ್ತು ದಕ್ಷಿಣ ಲಿಮಾದಲ್ಲಿಯೂ ಕಂಪನದ ಅನುಭವವುಂಟಾಗಿದೆ ಎಂದು ಆರ್‌ಪಿಪಿ ರೆಡಿಯೋ ವರದಿ ಮಾಡಿವೆ.