ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕೊಂಗೊ ದಾಳಿಯಲ್ಲಿ ವಿಶ್ವಸಂಸ್ಥೆಯ ಭಾರತೀಯ ಸೈನಿಕ ಬಲಿ (Congo | attack | Indian UN soldier | International)
Bookmark and Share Feedback Print
 
ಪ್ರಜಾಪ್ರಭುತ್ವ ಗಣರಾಜ್ಯ ಕಾಂಗೊದಲ್ಲಿ ಶಾಂತಿ ಪಾಲನೆಗಾಗಿ ನೇಮಕನಾಗಿದ್ದ ವಿಶ್ವಸಂಸ್ಥೆಯ ಭಾರತದ ಸೈನಿಕನೊಬ್ಬ, ಗಲಭೆಗ್ರಸ್ಥ ಗೋಮಾ ಪ್ರದೇಶದಲ್ಲಿ ಸರಕಾರದ ಮೇಲೆ ಗೋಲಿಬಾರ್ ನಡೆಸಿದ ಸಂದರ್ಭದಲ್ಲಿ ಶೂಟೌಟ್‌ನಲ್ಲಿ ಬಲಿಯಾಗಿದ್ದಾರೆಂದು ಎಮ್‌ಒಎನ್‍ಯುಸಿ ಪಡೆ ತಿಳಿಸಿದೆ.

ಘಟನೆಯಲ್ಲಿ ಕಾಂಗೊದ ಸೈನಿಕ ಮತ್ತು ನಾಗರಿಕಬ್ಬರು ಮೃತಪಟ್ಟಿದ್ದು, ಮೂವರು ಯೋಧರು ಮತ್ತು ಇನ್ನೊರ್ವ ನಾಗರಿಕ ಕೂಡಾ ಗಾಯಗೊಂಡಿದ್ದಾರೆಂದು ವಿಶ್ವಸಂಸ್ಥೆ ಮೂಲಗಳು ತಿಳಿಸಿವೆ.

ಕಾಂಗೊಲೀಸ್ ಭದ್ರತಾ ಪಡೆ (ಎಫ್‌ಎಆರ್‌ಡಿಸಿ) ವಿರುದ್ಧ ಶಸ್ತ್ರಾಸ್ತ ಧಾರಿಯೊಬ್ಬ ಆಕ್ರಮಣ ನಡೆಸಿದಾಗ ಕಾರ್ಯಪ್ರವೃತ್ತರಾದ ತಮ್ಮ ಪಡೆಯು ದಾಳಿಗಾರನನ್ನು ಕೊಂದು ಹಾಕಿದೆ ಎಂದು ವಿಶ್ವಸಂಸ್ಥೆ ಮಿಷನ್ ಡಿಆರ್ ಕೊಂಗೊ (ಎಮ್‌ಒಎನ್‍ಯುಸಿ) ವಕ್ತಾರ ತಿಳಿಸಿದ್ದಾರೆ.

ಆದರೆ ಘಟನೆಯಲ್ಲಿ ಭಾರತೀಯ ಸೈನಿಕನೊಬ್ಬ ಗಾಯಗೊಂಡಿದ್ದ. ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಜೀವ ಕಳೆದುಕೊಂಡರು ಎಂದವರು ಹೇಳಿದರು. ಆದರೆ ದಾಳಿ ನಡೆಸಿದಾತನ ಗುರುತು ಪತ್ತೆ ಹಚ್ಚಲಾಗಲಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ