ಕಳೆದ ನಾಲ್ಕು ದಶಕಗಳಲ್ಲಿ ಜಾಗತಿಕವಾಗಿ ವರ್ಷ ಪ್ರತಿ ಮರಣ ಹೊಂದುತ್ತಿರುವ ಐದು ವರ್ಷದೊಳಗಿನ ಶಿಶುಗಳ ಸಂಖ್ಯೆಯಲ್ಲಿ ಶೇಕಡಾ 60ರಷ್ಟು ಕುಸಿತ ಕಂಡಿದೆ ಎಂದು ವರದಿಯೊಂದು ಸೋಮವಾರ ತಿಳಿಸಿದೆ.
ಕಳೆದ 20 ವರ್ಷಗಳಲ್ಲಿ ನವಜಾತ ಶಿಶು, ಹಸುಳೆ ಮತ್ತು 1-4 ವರ್ಷದ ಮಕ್ಕಳ ಮರಣ ಸಂಖ್ಯೆಯಲ್ಲಿ 11.9 ಮಿಲಿಯನ್‌ರಿಂದ 2010ರ ವೇಳೆಗೆ 7.7 ಮಿಲಿಯನ್‌ಗೆ ತಲುಪಿರುವುದೇ ಮರಣ ಸಂಖ್ಯೆ ಕುಸಿತ ತ್ವರಿತವಾಗಲು ಕಾರಣ ಎಂದು ನೂತನ ಅಂಕಿ ಅಂಶ ವ್ಯಕ್ತಪಡಿಸಿದೆ.
ವಿಶ್ವದ ಬಡ ದೇಶಗಳಲ್ಲಿ ತಡೆಗಟ್ಟಲಾಗದ ರೋಗಗಳಿಂದಾಗಿ ಮಕ್ಕಳ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ಯುರೋಪ್‌ನ ಸ್ಕಾನ್‌ಡಿವಾನಿಯಾಕ್ಕೆ ಹೋಲಿಸಿದಾಗ ಚಾದ್, ಮಾಲಿ ಮತ್ತು ನೈಜಿರಿಯಾದಂತಹ ಪ್ರದೇಶದಲ್ಲಿ ಜನಿಸಿದ ಮಕ್ಕಳು ತಮ್ಮ 5ನೇ ಹುಟ್ಟುಹಬ್ಬವನ್ನು ಆಚರಿಸುವಾಗ ಸಾಧ್ಯತೆ ಆರು ಪಟ್ಟು ಕಡಿಮೆಯಾಗಿದೆ ಎಂಬ ಆಘಾತಕಾರಿ ಅಂಶವನ್ನು ವರದಿ ಬಿಡುಗಡೆ ಮಾಡಿವೆ.
ಆದರೂ ವಿಶ್ವಸಂಸ್ಥೆಯ ಮಿಲೆನಿಯಮ್ ಅಭಿವೃದ್ಧಿ ಗುರಿಯಂತೆ 1990-2015ರ ಅವಧಿಯಲ್ಲಿ ಜಾಗತಿಕ ಶಿಶು ಮರಣ ಸಂಖ್ಯೆ ಶೇಕಡಾ 66ರಷ್ಟು ಕುಸಿತದ ಗುರಿಯಿರಿಸಿಲಾಗಿತ್ತು. ಆದರೆ ಇದೀಗಲೂ ಅದಕ್ಕೆ ಹಿನ್ನಡೆ ಉಂಟಾಗಿದೆ.