ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಂದೆ, ಮಗ ಮತ್ತು ಮೊಮ್ಮಗನ ಜನ್ಮದಿನ ಒಂದೇ (Man | Son | Grandson | Birthday | Same day)
Bookmark and Share Feedback Print
 
PTI
ಬ್ರಿಟನ್‌ನಲ್ಲಿ ತಂದೆ, ಮಗ ಮತ್ತು ಮೊಮ್ಮಗ ಅವರ ಹುಟ್ಟು ಹಬ್ಬದ ದಿನ ಒಂದೇಯಾಗಿದ್ದು,ಮುಂದಿನ ಭವಿಷ್ಯದಲ್ಲಿ ಕೂಡಾ ಅದೇ ದಿನ ಮಕ್ಕಳು ಜನ್ಮತಳೆಯುವ ವಿಶ್ವಾಸವನ್ನು ಅವರ ಕುಟುಂಬ ಹೊಂದಿದೆ.

ಬೆಂಜಮಿನ್ ಫಾಕ್ಸ್ ಮೇ 8 ರಂದು ಜನ್ಮತಾಳಿದ್ದು, ಅವರ ತಂದೆ ಲಿ ಹಾಗೂ ಅಜ್ಜ ಹ್ಯಾರಿ ಫಾಕ್ಸ್ ಅವರು ಕೂಡಾ ಮೇ 8 ರಂದು ಜನ್ಮತಾಳಿದ್ದರಿಂದ ಹುಟ್ಟು ಹಬ್ಬವನ್ನು ಹಂಚಿಕೊಂಡು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ.

ಬೆಂಜಮಿನ್ ತಂದೆ ಲಿ 1975 ಮೇ 8 ರಂದು ಜನ್ಮತಾಳಿದ್ದಾರೆ. ಲಿ ಅವರ ತಂದೆ ಹ್ಯಾರಿ ಫಾಕ್ಸ್ 1949 ಮೇ 8 ರಂದು ಜನ್ಮತಾಳಿರುವುದು ವಿಶೇಷವಾಗಿದೆ.

ಲಂಡನ್‌ನ ಎಸ್ಸೆಕ್ಸ್ ರೊಮ್‌ಫೋರ್ಡ್‌ನಲ್ಲಿ ವಾಸಿಸುವ ಲಿ ಮಾತನಾಡಿ, ತನ್ನ ಹುಟ್ಟು ಹಬ್ಬದ ದಿನದಂದು ಮಗುವಿನ ಜನ್ಮವಾಗುವ ನಿರೀಕ್ಷೆಗಳಿವೆ ಎಂದು ತಿಳಿದು ತುಂಬಾ ಆಶ್ಚರ್ಯವಾಯಿತು ಎಂದು ಹೇಳಿದ್ದಾರೆ.

ಪತ್ನಿಯ ಉದರದಲ್ಲಿರುವ ಮಗುವಿನ ಪರೀಕ್ಷೆ ನಡೆಸಿದ ವೈದ್ಯರು, ಮೇ 8 ರಂದು ಮಗುವಿನ ಜನ್ಮವಾಗಲಿದೆ ಎಂದು ಹೇಳಿದಾಗ ನನಗೆ ನಂಬಲು ಸಾಧ್ಯವಾಗಲಿಲ್ಲ. ಯಾಕೆಂದರೆ ಅಂದೇ ನನ್ನ ಮತ್ತು ತಂದೆಯ ಜನ್ಮದಿನವಾಗಿರುವುದು.

ಮಗುವಿನ ಜನ್ಮ ನಿಗದಿತ ದಿನದಂದು ಜನ್ಮವಾಗುವುದಿಲ್ಲ. ಕೆಲುವು ಬಾರಿ ಮುಂದೆ ಹೋಗಬಹುದು ಎಂದು ವೈದ್ಯರು ಈ ಮೊದಲು ತಿಳಿಸಿದ್ದರು. ಆದ್ದರಿಂದ ಮಗು ನನ್ನ ಹಾಗೂ ತಂದೆಯ ಜನ್ಮದಿನದಂದೇ ಜನಿಸುವ ಬಗ್ಗೆ ಯೋಚಿಸಿರಲಿಲ್ಲ ಎಂದು ಬೆಂಹಮಿನ್ ತಿಳಿಸಿದ್ದಾರೆ.

ಅಜ್ಜ ಹ್ಯಾರಿ ಮಾತನಾಡಿ, ಒಂದೇ ಕುಟುಂಬದಲ್ಲಿ ಒಂದೇ ದಿನದಂದು ಜನ್ಮತಾಳುವುದು ತುಂಬಾ ವಿರಳ.ನನ್ನ ಮಗ ಲಿ ನನ್ನ ಜನ್ಮದಿನದಂದು ಹುಟ್ಟಿದಾಗ ತುಂಬಾ ಸಂತೋಷವಾಗಿತ್ತು. ಆದರೆ ಮೊಮ್ಮಗ ಕೂಡಾ ನನ್ನ ಜನಿಸಿದ ದಿನದಂದು ಜನ್ಮತಾಳಿರುವುದು ಕಾಕತಾಳೀಯವಾಗಿದೆ ಎಂದರು.

ಮುಂದಿನ ದಿನಗಳಲ್ಲಿ, ಭರ್ಜರಿ ಹುಟ್ಟುಹಬ್ಬ ದಿನಾಚರಣೆಯನ್ನು ಆಚರಿಸುವದಕ್ಕಾಗಿ ನಿರೀಕ್ಷಿಸುತ್ತಿದ್ದೇವೆ ಎಂದು ಹ್ಯಾರಿ ಸಂತಸ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತಂದೆ, ಮಗ, ಮೊಮ್ಮಗ, ಜನ್ಮದಿನ