ಇನ್ನೂ ಮುಂದೆ ಭಾರತೀಯ ಪ್ರಜೆಗಳು ವೀಸಾ ಇಲ್ಲದೆಯೂ ಮಲೇಷ್ಯಾ ಪ್ರವಾಸ ಕೈಗೊಳ್ಳಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ಮಲೇಷ್ಯಾ ಸರಕಾರ ಕೈಗೊಂಡಿದ್ದು, ಜುಲೈ ತಿಂಗಳಿನಿಂದ ದೇಶಕ್ಕೆ ಆಗಮಿಸುವ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಪ್ರವಾಸಿಗರಿಗೆ ವೀಸಾದ ಅವಶ್ಯಕತೆಯಿಲ್ಲ ಎಂದು ಹೇಳಿದೆ.
ವಿದೇಶಿಗರು ವೀಸಾ ಇಲ್ಲದೆಯೂ ದೇಶದ ಪ್ರಯಾಣ ಕೈಗೊಳ್ಳಬಹುದಾಗಿದೆ ಎಂದು ಮಲೇಷ್ಯಾ ಉಪ ಪ್ರಧಾನ ಮಂತ್ರಿ ಮುಯ್ಯಿದ್ದೀನ್ ಯಾಸೀನ್ ತಿಳಿಸಿದ್ದಾರೆ. ಆ ಮೂಲಕ ಈ ನಾಲ್ಕು ದೇಶಗಳ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಮಲೇಷ್ಯಾ ಗುರಿಯರಿಸಿಕೊಂಡಿದೆ.
ನಾವು ಈ ಹಿಂದೆಯೂ ಭಾರತೀಯ ಪ್ರವಾಸಿಗರಿಗೆ ಇಂತಹುದೇ ಸೌಲಭ್ಯವನ್ನು ಒದಗಿಸಿದ್ದೆವು. ಆದರೆ ನಂತರ ಹಿಂತೆಗೆದುಕೊಳ್ಳಲಾಗಿತ್ತು. ಆದರೆ ಇದೀಗ ಪುನಃ ಸ್ಥಾಪಿಸಲಾಗುತ್ತಿದೆ ಎಂದವರು ಹೇಳಿದರು.
ಆ ಮೂಲಕ ಹೆಚ್ಚಿನ 8,000ರಿಂದ 10,000 ಪ್ರವಾಸಿಗರನ್ನು ಆಕರ್ಷಿಸಲು ಮಲೇಷ್ಯಾ ಗುರಿಯಿರಿಸಿಕೊಂಡಿದೆ.