ಪೋಲೆಂಡ್‌ನಲ್ಲಿ ಸುರಿಯುತ್ತಿರುವ ಭಾರೀ ಪ್ರವಾಹ ಹಿನ್ನಲೆಯಲ್ಲಿ ಪ್ರವಾಹದ ಸ್ಥಿತಿಯುಂಟಾಗಿದ್ದು, ಕನಿಷ್ಠ 14 ಮಂದಿ ಬಲಿಯಾಗಿದ್ದಾರೆಂದು ವರದಿಗಳು ತಿಳಿಸಿವೆ.
ವಾರ್‌ಸೊದಿಂದ 100 ಕೀ. ಮೀ. ವಾಯುವ್ಯ ಪ್ರದೇಶದಲ್ಲಿ ಉಂಟಾಗಿರುವ ನೆರೆ ಹಾವಳಿಯಿಂದ 18 ಪೋಲಿಶ್ ಸಮುದಾಯವು ಜಲಾವೃತ್ತವಾಗಿವೆ.
ಪ್ಲಾಕ್ ಪ್ರದೇಶದಲ್ಲಿಯೂ ಉಂಟಾಗಿರುವ ಇದೇ ಪರಿಸ್ಥಿತಿಯಿಂದಾಗಿ 8 ಸಾವಿರ ಹೆಕ್ಟರ್ ಜಮೀನು ಜವಾವೃತವಾಗಿದ್ದು, 4000 ನಾಗರಿಕರು ಹಾಗೂ 5000 ಪ್ರಾಣಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ದೇಶದ ವಿವಿದೆಡೆಗಳಲ್ಲಾಗಿ 4,200ರಷ್ಟು ಯೋಧರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಸಚಿವಾಲಯ ಪ್ರಕಾರ ಮೇ30ರಿಂದ ಜೂನ್ 6ರ ಅವಧಿಯಲ್ಲಿ ಪ್ರವಾಹದ ಪ್ರಭಾವ ಕಡಿಮೆಯಾಗುವ ಸಾಧ್ಯೆತೆಯಿದೆ. ಆದರೆ ಭಾರೀ ಮಳೆ ಮುಂದುವರಿದರೆ ಸ್ಥಿತಿ ಕಷ್ಟಕರವಾಗುವುದು ಎಂದೂ ತಿಳಿಸಿದೆ.