ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಟಿಬೆಟ್, ತೈವಾನ್‌ ಬಗ್ಗೆ ಮೂಗು ತೂರಿಸಬೇಡಿ: ಚೀನಾ ಎಚ್ಚರಿಕೆ (Tibet | Taiwan | China | US)
Bookmark and Share Feedback Print
 
ಅಮೆರಿಕಾ ಜತೆಗಿನ ತಾಂತ್ರಿಕ ಸಂಬಂಧದಲ್ಲಿ ಮುನ್ನಡೆಯುವ ಇರಾದೆ ವ್ಯಕ್ತಪಡಿಸಿರುವ ಚೀನಾ, ಅದಕ್ಕಾಗಿ ಒಬಾಮಾ ಆಡಳಿತವು ತೈವಾನ್ ಮತ್ತು ಟಿಬೆಟ್ ವಿದಾದದಿಂದ ದೂರ ಉಳಿಯಬೇಕು ಎಂದು ಸಲಹೆ ನೀಡಿದೆ.

ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಜತೆಗಿನ ಮೊದಲ ಸುತ್ತಿನ ತಾಂತ್ರಿಕ ಮತ್ತು ಹಣಕಾಸು ಮಾತುಕತೆಯ ಸಂದರ್ಭದಲ್ಲಿ ಚೀನಾ ನಿಯೋಗಯು ತಮ್ಮ ಅಭಿಮತವನ್ನು ವ್ಯಕ್ತಪಡಿಸಿದ್ದು, ತೈವಾನ್ ಮತ್ತು ಟಿಬೆಟ್‌ನತ್ತ ತೋರುತ್ತಿರುವ ಆಸಕ್ತಿಗೆ ಅಮೆರಿಕಾವು ದುಬಾರಿ ಬೆಲೆ ತೆರಬೇಕಾದಿತು ಎಂದು ಎಚ್ಚರಿಕೆಯನ್ನೂ ನೀಡಿದೆ.

ಸೋಮವಾರದಿಂದ ಆರಂಭವಾಗಿರುವ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ ಮಾಡಲಾಗಿರುವ ಏಳು ಸಲಹೆಗಳಲ್ಲಿ ಇದು ಒಂದಾಗಿದೆ ಎಂದು ಚೀನಾದ ವಕ್ತಾರ ಮಾ ಜಾಓಕ್ಸು ತಿಳಿಸಿದ್ದಾರೆ.

ಈ ಹಿಂದೆ ತೈವಾನ್‌ಗೆ 6.4 ಬಿಲಿಯನ್ ಡಾಲರುಗಳ ಸೇನಾ ನೆರವು ನೀಡಿದ್ದ ಒಬಾಮಾ ಕ್ರಮದ ಬಗ್ಗೆ ಚೀನಾ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೆ ಟಿಬೆಟ್ ಸ್ವತಂತ್ರ ರಾಷ್ಟ್ರ್ರಕ್ಕಾಗಿ ಹೋರಾಡುತ್ತಿರುವ ಧಾರ್ಮಿಕ ನಾಯಕ ದಲೈಲಾಮಾ ಜತೆಗಿನ ಒಬಾಮಾ ಮಾತುಕತೆಯ ಬಗ್ಗೆಯೂ ಕೆಂಗಣ್ಣು ಬೀರಿತ್ತು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚೀನಾ, ಟಿಬೆಟ್, ತೈವಾನ್, ಅಮೆರಿಕಾ