ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 26/11 ಪ್ರಕರಣದಲ್ಲಿ ಹಫೀಜ್ ವಿರುದ್ಧ ಸಾಕ್ಷಿಗಳಿಲ್ಲ:ಪಾಕ್ ಸು.ಕೋ (Pakistan|Mumbai attacks| Pak SC)
Bookmark and Share Feedback Print
 
PTI
ಮುಂಬೈ ದಾಳಿಯ ರೂವಾರಿ, ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್ ಅವರ ಬಿಡುಗಡೆಯನ್ನು ವಿರೋಧಿಸಿ, ಅಧಿಕಾರಿಗಳು ಸಲ್ಲಿಸಿದ ಮನವಿಯನ್ನು ತಳ್ಳಿಹಾಕಿದ ಸರ್ವೋಚ್ಚ ನ್ಯಾಯಾಲಯ, ಆರೋಪಿಯ ವಿರುದ್ಧ ಪ್ರಕರಣದಲ್ಲಿ ಭಾಗಿಯಾದ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಿಲ್ಲ ಎಂದು ಹೇಳಿಕೆ ನೀಡಿದೆ.

ಸಯೀದ್ ಅವರ ಬಿಡುಗಡೆ ಕುರಿತಂತೆ ಲಾಹೋರ್ ಹೈಕೋರ್ಟ್‌ ನೀಡಿದ ಆದೇಶದ ವಿರುದ್ಧ ಕೇಂದ್ರ ಹಾಗೂ ಪಂಜಾಬ್ ಸರಕಾರಗಳು, ಕಳೆದ ವರ್ಷ ಅಪೆಕ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದವು. ಆದರೆ ಕೆಲ ತಾಂತ್ರಿಕ ಕಾರಣಗಳಿಂದ ವಿಚಾರಣೆಗೆ ತೆಗೆದುಕೊಳ್ಳಲು ವಿಳಂಬವಾಯಿತು ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.

ಸಯೀದ್ ಪ್ರಕರಣ ಇಂದು ವಿಚಾರಣೆಗೆ ಬಂದಿದ್ದು, ನ್ಯಾಯಮೂರ್ತಿ ನಾಸಿರ್-ಉಲ್-ಮುಲ್ಕ್ ನೇತೃತ್ವದ ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ, ಸರಕಾರದ ಮನವಿಗಳನ್ನು ತಳ್ಳಿಹಾಕಿದೆ. ಹೆಚ್ಚಿನ ವಿವರಗಳು ತಕ್ಷಣಕ್ಕೆ ಲಭ್ಯವಾಗಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈಯಲ್ಲಿ ನಡೆದ ಉಗ್ರರ ದಾಳಿಯ ನಂತರ, ಜೆಯುಡಿ ಎಲ್‌ಇಟಿ ಮುಖವಾಡವಾಗಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿ ಹೇಳಿಕೆ ಪ್ರಕಟಿಸಿದ್ದರಿಂದ, ನಿಷೇಧಿತ ಸಂಘಟನೆಯಾದ ಲಷ್ಕರ್-ಎ-ತೊಯಿಬಾ ಸಂಸ್ಥಾಪಕ ಹಫೀಜ್ ಸಯೀದ್, ಕಳೆದ ಡಿಸೆಂಬರ್ 2008ರಿಂದ ಗೃಹಬಂಧನದಲ್ಲಿದ್ದರು.

ಹಫೀಜ್ ಸಯೀದ್, ತಮ್ಮ ಗೃಹಬಂಧನವನ್ನು ವಿರೋಧಿಸಿ, ಲಾಹೋರ್ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು.

ಕೇಂದ್ರ ಹಾಗೂ ಪಂಜಾಬ್ ಸರಕಾರಗಳು ಆರೋಪಿಯನ್ನು ಬಂಧನದಲ್ಲಿಡಲು ಅಗತ್ಯವಾದ ತೃಪ್ತಿಕರವಾದ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ವಿಫಲವಾಗಿದ್ದರಿಂದ, ಹೈಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ಪೀಠ,ಸಯೀದ್ ಅವರನ್ನು ಕಳೆದ ವರ್ಷ ಜೂನ್ 2 ರಂದು ಖುಲಾಸೆಗೊಳಿಸಿತ್ತು.

ಭಾರತ ಮತ್ತು ಅಂತಾರಾಷ್ಟ್ರೀಯ ಸಮುದಾಯಗಳ ಒತ್ತಡದಿಂದಾಗಿ, ಫೆಡರಲ್ ಮತ್ತು ಪಂಜಾಬ್ ಸರಕಾರಗಳು ಲಾಹೋರ್ ಹೈಕೋರ್ಟ್‌ ತೀರ್ಪಿನ ವಿರುದ್ಧ ಅಪೆಕ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದವು.
ಸಂಬಂಧಿತ ಮಾಹಿತಿ ಹುಡುಕಿ