ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚಿಕಾಗೊ: ಭಾರತೀಯ ಮೂಲದ ಕ್ಲಿನಿಕ್‌ಗೆ ಎಫ್‌ಬಿಐ ದಾಳಿ (India | Chicago | clinic | FBI)
Bookmark and Share Feedback Print
 
ಭಾರತೀಯ ಮೂಲದ ವೈದ್ಯರೊಬ್ಬರ ತೂಕ ಕಡಿಮೆ ಮಾಡುವ ಕ್ಲಿನಿಕ್‌ವೊಂದಕ್ಕೆ ಎಫ್‌ಬಿಐ ದಾಳಿ ನಡೆಸಿದೆ. ಅಮೆರಿಕಾ ಡ್ರಗ್ಸ್ ಆಡಳಿತದ (ಎಫ್‌ಡಿಎ) ಮಲ್ಟಿ-ಜ್ಯುರಿಸ್ಟಿಡಿಕ್ಷನಲ್ ತನಿಖೆಯ ಅಂಗವಾಗಿ ದಾಳಿ ನಡೆಸಿದೆ ಎಂದು ಹೇಳಲಾಗಿದೆ.

ಕಳೆದ ವಾರ ರಾಕೇಶ್ ರಾಯ್ ಆನಂದ್ ಕಚೇರಿಗೆ ದಾಳಿ ನಡೆಸಿದ ಎಫ್‌ಡಿಎ, ಎಫ್‌ಬಿಐ ಮತ್ತು ಆಂತರಿಕ ತೆರಿಗೆ ಇಲಾಖೆಯು ದಾಖಲೆ ಪತ್ರಗಳ ಪರಿಶೋಧನೆ ನಡೆಸಿತ್ತು.

ಮಲ್ಟಿ-ಜ್ಯುರಿಸ್ಟಿಡಿಕ್ಷನಲ್ ತನಿಖೆಯ ಭಾಗವಾಗಿ ಆನಂದ್‌ರ ಮೂರು ಕಚೇರಿ ಸಹಿತ ಕ್ಲಿನಿಕ್ ಮೇಲೆ ದಾಳಿ ನಡೆಸಿತ್ತು. ಇದರಿಂದಾಗಿ ಒಂದು ವಾರ ಕ್ಲಿನಿಕ್ ಮುಚ್ಚುಗಡೆಗೊಂಡಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆನಂದ್, ದಾಳಿಯಲ್ಲಿ ಅಸಾಮಾನ್ಯವಾದದು ನಡೆದಿಲ್ಲ. ಅವರಿಗೆ ಕೆಲವು ದಾಖಲೆಗಳ ಅಗತ್ಯವಿತ್ತು. ಅದನ್ನು ಪಡೆದ ನಂತರ ತೆರಳಿದರು ಎಂದವರು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ