ಪೊರ್ಟ್ ಆಫ್ ಸ್ಪೇನ್, ಮಂಗಳವಾರ, 25 ಮೇ 2010( 17:48 IST )
ಟ್ರೆನಿಡಾಡ್ ಮತ್ತು ಟೊಬಾಗೋ ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಭಾರತೀಯ ಮೂಲದ ಮುತ್ಸದ್ಧಿ ಕಮ್ಲಾ ಪ್ರಸಾದ್ ಬಿಸ್ಸೆಸ್ಸಾರ್ ಆಯ್ಕೆಯಾಗಿದ್ದಾರೆ.
ಕಳೆದ 43 ವರ್ಷ ಕಾಲ ಅಧಿಕಾರದಲ್ಲಿದ್ದ ಪಕ್ಷದ ಆಡಳಿತವನ್ನು ಕೊನೆಗೊಳಿಸುವ ಮೂಲಕ ಕಮ್ಲಾ ನೇತೃತ್ವದ ಸಮ್ಮಿಶ್ರ ಸರಕಾರವು ಅಧಿಕಾರಕ್ಕೇರಿದೆ.
ಸೋಮವಾರ ನಡೆದಿದ್ದ ಸಂಸದೀಯ ಚುನಾವಣೆಯಲ್ಲಿ ಪ್ರಸಾದ್ ನೇತೃತ್ವದ ಪೀಪಲ್ಸ್ ಪಾಟ್ನರ್‌ಶಿಪ್ ಪಕ್ಷ ಒಟ್ಟು 41 ಸೀಟುಗಳಲ್ಲಿ 29ನ್ನು ಗೆದ್ದುಕೊಂಡಿತ್ತು.
ಹಿರಿಯ ರಾಜಕಾರಿಣಿ ಕೂಡಾ ಆಗಿರುವ ಪ್ರಸಾದ್ ಇಬ್ಬರು ಮಕ್ಕಳ ಅಜ್ಜಿ ಕೂಡಾ ಆಗಿದ್ದಾರೆ.
ಐದು ಪಕ್ಷಗಳ ಸಮ್ಮಿಶ್ರ ಸರಕಾರಕ್ಕೆ ಯುನೈಟೆಡ್ ನ್ಯಾಷನಲ್, ಕಾಂಗ್ರೆಸ್ ಆಫ್ ದಿ ಪೀಪಲ್ (ಸಿಒಪಿ), ದಿ ನ್ಯಾಷನಲ್ ಜಾಯಿಂಟ್ ಆಕ್ಷನ್ ಕಮಿಟಿ, ಟೊಬಗೊ ಆರ್ಗನೈಜೇಷನ್ ಆಫ್ ಪೀಪಲ್ಸ್ ಮತ್ತು ಮುವ್‌ಮೆಂಟ್ ಫಾರ್ ಸೋಷಿಯಲ್ ಚೆಂಜ್ ಬೆಂಬಲ ಘೋಷಿಸಿದೆ.