ಭದ್ರತಾ ವೆಚ್ಚ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ವೀಸಾ ಶುಲ್ಕವನ್ನು ಜೂನ್ 4ರಿಂದ ಹೆಚ್ಚಿಸುವುದಾಗಿ ಅಮೆರಿಕ ತಿಳಿಸಿದೆ.
2008 ಜನವರಿ 1ರಂದು ವೀಸಾ ಶುಲ್ಕವು ಜಾರಿಗೆ ಬಂದಿತ್ತು. ಅಂದಿನಿಂದ 131 ಡಾಲರ್ ಪಡೆಯಲಾಗುತ್ತಿತ್ತು. ಆದರೆ ಭದ್ರತಾ ವೆಚ್ಚ ಸಹಿತ ಹಲವು ಕಾರಣಗಳಿಂದಾಗಿ ತಾತ್ಕಾಲಿಕ ವೀಸಾ ವೆಚ್ಚವನ್ನು ಅಧಿಕಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ.
ತಾತ್ಕಾಲಿಕ ವೀಸಾ ಶುಲ್ಕದ ಹೆಚ್ಚಳ ಅನಿವಾರ್ಯವಾಗಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ತಿಳಿಸಿದೆ