ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜರ್ದಾರಿ ಭ್ರಷ್ಟಾಚಾರ ಪ್ರಕರಣ ಮರು ತನಿಖೆಯಿಲ್ಲ: ಪಾಕ್ (Pakistan | Asif Ali Zardari | Supreme Court | Switzerland)
Bookmark and Share Feedback Print
 
ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಪಾಕ್‌ನ ಹಾಲಿ ಅಧ್ಯಕ್ಷರಾಗಿರುವ ಆಸಿಫ್ ಅಲಿ ಜರ್ದಾರಿ ಅವರು ನಡೆಸಿರುವ ಭ್ರಷ್ಟಾಚಾರ ಪ್ರಕರಣಗಳ ಮರು ತನಿಖೆ ಸಾಧ್ಯವಿಲ್ಲ ಎಂದು ಪಾಕಿಸ್ತಾನ ಸರಕಾರ ತನ್ನ ನಿರ್ಧಾರವನ್ನು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದು, ಜರ್ದಾರಿ ವಿರುದ್ಧದ 60ಮಿಲಿಯನ್ ಡಾಲರ್ ಹಗರಣ ಉತ್ಪ್ರೇಕ್ಷಿತ ಎಂದು ಹೇಳಿದೆ.

ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಕ್ರಮವನ್ನು ಕಾರ್ಯಗತ ಮಾಡುವಲ್ಲಿ ವಿಫಲಗೊಂಡಿದ್ದರ ಹಿನ್ನಲೆಯಲ್ಲಿ ಸರಕಾರ ವಿವರಣೆ ನೀಡುವಂತೆ ಕಾನೂನು ಸಚಿವ ಬಾಬರ್ ಅವಾನ್‌ ಅವರಿಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿತ್ತು. ಆದರೆ ಐದು ಸದಸ್ಯರ ಪೀಠದ ಮುಂದೆ ಹಾಜರಾದ ಅವಾನ್, ಸದ್ಯ ಜರ್ದಾರಿ ವಿರುದ್ಧ ಸ್ವಿಟ್ಜರ್ಲೆಂಡ್‌ನಲ್ಲಿ ಯಾವುದೇ ಪ್ರಕರಣ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಸ್ವಿಸ್ ಬ್ಯಾಂಕ್‌ಗಳಲ್ಲಿ ಜರ್ದಾರಿ ಇರಿಸಲಾಗಿದೆ ಎನ್ನಲಾದ 60 ಮಿಲಿಯನ್ ಡಾಲರ್ ಮರಳಿ ಪಡೆಯುವ ನಿಟ್ಟಿನಲ್ಲಿ ಪಾಕ್ ಸರಕಾರ ಕೈಗೊಂಡ ಕ್ರಮಗಳೇನು ಎಂದು ಪೀಠ ಪ್ರಶ್ನಿಸಿದಾಗ, ಈ ವರದಿಗಳೆಲ್ಲಾ 'ಉತ್ಪ್ರೇಕ್ಷಿತ' ಎಂದು ಹೇಳಿದ ಅವಾನ್ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ