ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದದ (ಎನ್‍ಪಿಟಿ) ಅಂತಿಮ ದಾಖಲೆ ಪತ್ರಕ್ಕೆ ಭಾರತ, ಪಾಕಿಸ್ತಾನ ಮತ್ತು ಇಸ್ರೇಲ್ ರಾಷ್ಟ್ರಗಳು ಸಹಿ ಹಾಕುವಂತೆ ವಿಶ್ವಸಂಸ್ಥೆಯ ಸಮಾವೇಶದಲ್ಲಿ ಒತ್ತಾಯಿಸಿದೆ.
ಸಮಾವೇಶದಲ್ಲಿ ಭಾರತ, ಇಸ್ರೇಲ್ ಮತ್ತು ಪಾಕಿಸ್ತಾನ ದೇಶಗಳಿಗೆ ಒಪ್ಪಂದಕ್ಕೆ ಸಹಿ ಹಾಕುವಂತೆ ಮನವಿ ಮಾಡಿಕೊಂಡಿದೆ. ಆ ಮೂಲಕ ಅಣ್ಣಸ್ತ್ರ ಸಾಮಾಗ್ರಿ ಮತ್ತು ಇತರ ಸ್ಫೋಟಕ ಸಲಕರಣೆಗಳನ್ನು ಹೊಂದಿರಬಾರದು ಎಂಬ ನಿಯಮಕ್ಕೆ ಬದ್ಧರಾಗಿರಬೇಕೆಂದು ಸೂಚಿಸಿದೆ.
ಇದೇ ವೇಳೆ ಅಣ್ವಸ್ತ್ರ ಪರೀಕ್ಷೆಯನ್ನು ಭಾರತ ಮತ್ತು ಪಾಕಿಸ್ತಾನದಲ್ಲಿ ರದ್ದುಗೊಳಿಸಬೇಕೆಂದು ಸಮಾವೇಶ ಕೇಳಿಕೊಂಡಿದೆ. ಅಲ್ಲದೆ ಸಮಗ್ರ ಅಣ್ವಸ್ತ್ರ ಪರೀಕ್ಷೆ ನಿಷೇಧ(ಸಿಟಿಬಿಟಿ) ಒಪ್ಪಂದಕ್ಕೆ ಸಹಿ ಹಾಕುವಲ್ಲಿ ಇನ್ನಷ್ಟು ವಿಳಂಬ ಮಾಡಬಾರದು ಎಂದು ಮನವಿ ಮಾಡಿಕೊಂಡಿದೆ.